Wednesday, June 24, 2026
Homeತಾಜಾ ಸುದ್ದಿನಿಮ್ಮ ತಲೆಯಲ್ಲಿ ಕೂದಲಿಲ್ಲ ಎಂದು ಅಪಹಾಸ್ಯ ಮಾಡಿದ ಪತ್ನಿ; ಮನನೊಂದು ಪತಿ ಆತ್ಮಹತ್ಯೆಗೆ ಶರಣು

ನಿಮ್ಮ ತಲೆಯಲ್ಲಿ ಕೂದಲಿಲ್ಲ ಎಂದು ಅಪಹಾಸ್ಯ ಮಾಡಿದ ಪತ್ನಿ; ಮನನೊಂದು ಪತಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಚಾಮರಾಜನಗರ; ನಿಮ್ಮ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಅಪಹಾಸ್ಯ ಮಾಡಿದ್ದರಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವಮೂರ್ತಿ(32) ಮೃತ ವ್ಯಕ್ತಿ.

 ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಲಾರಿ ಚಾಲಕನಾಗಿದ್ದ ಪರಶಿವಮೂರ್ತಿ ಎರಡು ವರ್ಷದ ಹಿಂದೆ ಮಮತಾ ಅವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಪರಶಿವಮೂರ್ತಿ ಕೂದಲು ಸಂಪೂರ್ಣ ಉದುರಿತ್ತು. ಹೊರಗಡೆ ಹೋದರೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ಸಹ ಮಮತಾ ದಾಖಲಿಸಿದ್ದು, ಪರಶಿವಮೂರ್ತಿಯನ್ನ ಜೈಲಿಗೂ ಕಳುಹಿಸಿದ್ದರು. ಇಷ್ಟೇ ಅಲ್ಲದೆ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದ ಮಮತ, ಮದುವೆಯಾಗಿದ್ದರೂ ತಾಳಿ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿತ್ತು. ಹೀಗಾಗಿ ಹೆಂಡತಿಯ ನವರಂಗಿ ಆಟಕ್ಕೆ ರೋಸಿ ಹೋಗಿದ್ದ ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.

- Advertisement -

Latest News

error: Content is protected !!