Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಸಾಲ ಮರು ಪಾವತಿ ಮಾಡಿದರೂ ಸಾಲದ ಆ್ಯಪ್ ನಿಂದ ಕಿರುಕುಳ, ದೂರು ದಾಖಲು

ಮಂಗಳೂರು: ಸಾಲ ಮರು ಪಾವತಿ ಮಾಡಿದರೂ ಸಾಲದ ಆ್ಯಪ್ ನಿಂದ ಕಿರುಕುಳ, ದೂರು ದಾಖಲು

- Advertisement -
- Advertisement -

ಮಂಗಳೂರು: ಸಾಲ ಮರು ಪಾವತಿ ಮಾಡಿದರೂ ಸಾಲದ ಆ್ಯಪ್ ನಿಂದ ಕಿರುಕುಳ ನೀಡಿಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರು ಫೆ.20ರಂದು ಯೂಟ್ಯೂಬ್‌ ನೋಡುತ್ತಿದ್ದ ವೇಳೆ ಸ್ಕೋರೆಪ್ರೋ ಎನ್ನುವ ಆ್ಯಪ್‌ನಲ್ಲಿ ಸಾಲ ಸವಲತ್ತುಗಳನ್ನು ನೋಡಿ ಆ್ಯಪ್‌ ಡೌನ್‌ ಲೋಡ್‌ ಮಾಡಿದ್ದಾರೆ. ಬಳಿಕ 38 ಸಾವಿರ ರೂ. ಸಾಲಕ್ಕೆ ಕೋರಿಕೆ ಸಲ್ಲಿಸಿದ್ದು, ಅವರ ಖಾತೆಗೆ 23,800 ರೂ. ಜಮೆಯಾಗಿದೆ. ಸಾಲ ಮರುಪಾವತಿ ಮಾಡುವಂತೆ ಬಂದ ಸಂದೇಶದಂತೆ ಫೆ. 24 ಮತ್ತು 25ರಂದು ಒಟ್ಟು 62,100 ರೂ. ಹಣವನ್ನು ಮರುಪಾವತಿ ಮಾಡಿದ್ದಾರೆ. 

ಆದರೆ ಆ್ಯಪ್‌ನವರು ಹೆಚ್ಚುವರಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಿದ್ದು ಮಾತ್ರವಲ್ಲದೆ, ದೂರುದಾರರ ತಂದೆ-ತಾಯಿಯ ಭಾವಚಿತ್ರಕ್ಕೆ ಅಶ್ಲೀಲ ತುಣುಕುಗಳನ್ನು ಸೇರಿಸಿ ದೂರುದಾರರ ಮೊಬೈಲ್‌ನಲ್ಲಿದ್ದ ಸ್ನೇಹಿತರ, ಸಂಬಂಧಿಕರ ವಾಟ್ಸಾಪ್‌ ಸಂಖ್ಯೆಗಳಿಗೆ ಕಳುಹಿಸಿ ಅದರ ಸ್ಕ್ರೀನ್‌ಶಾಟ್‌ ಅನ್ನು ದೂರುದಾರರ ಮೊಬೈಲ್‌ಗೆ ಕಳುಹಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!