Thursday, June 4, 2026
HomeUncategorizedಸರಕಾರಿ ನೌಕರರ ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

ಸರಕಾರಿ ನೌಕರರ ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

- Advertisement -
- Advertisement -

ಉಡುಪಿ: ಇಲ್ಲಿನ ಪರಿಸರದಲ್ಲಿ ದಿನೇ ದಿನೇ ಸರಕಾರಿ ನೌಕರರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಯುತ್ತಿದ್ದು, ಇದೀಗ ಕುಂಜಿಬೆಟ್ಟು ಸಿಬ್ಬಂದಿ ವಸತಿ ನಿಲಯದಲ್ಲಿರುವ ಮೂರು ಮೆಸ್ಕಾಂ ಅಧಿಕಾರಿಗಳ ನಿವಾಸಕ್ಕೆ ಕಳ್ಳರು ನುಗ್ಗಿದ್ದಾರೆ ಎನ್ನಲಾಗಿದೆ. 

ಕಳ್ಳರು ಬೀಗ ಮುರಿದು ಒಳ ನುಗ್ಗಿದ್ದಾರೆ ಎನ್ನಲಾಗಿದೆ.

ಹರೇರಾಮ ವಸತಿ ಸಮುಚ್ಚಯದ ಮನೆ, ಮೆಸ್ಕಾಂ ನೌಕರನ ಮನೆಯಲ್ಲಿ ಹಾಗೂ ಕೊಂಕಣ ರೈಲ್ವೆಯ ಕಿರಿಯ ಇಂಜಿನಿಯರ್ ಮನೆಯಲ್ಲೂ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.

ಮೂರು ವಾಚ್, ಬೆಳ್ಳಿ ನಾಣ್ಯ ಸೇರಿದಂತೆ ಕದ್ದ ಮಾಲು 15 ಸಾವಿರ ರೂ. ಅಂದಾಜಿಸಲಾಗಿದ್ದು, ತನಿಖೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕಳುಹಿಸಲಾಗಿದೆ.

ಘಟನೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!