Wednesday, June 3, 2026
Homeಉತ್ತರ ಕನ್ನಡಶಿರಸಿ ಮೂಲದ ವ್ಯಕ್ತಿಗೆ ಮಂಗನ ಖಾಯಿಲೆ ದೃಢ; ಸೋಂಕಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಶಿರಸಿ ಮೂಲದ ವ್ಯಕ್ತಿಗೆ ಮಂಗನ ಖಾಯಿಲೆ ದೃಢ; ಸೋಂಕಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

- Advertisement -
- Advertisement -

ಶಿರಸಿ: ತಾಲೂಕಿನ ಬಲವಳ್ಳಿ ಭಾಗದ 51 ವರ್ಷದ ವ್ಯಕ್ತಿಯೋರ್ವನಿಗೆ ಮಂಗನ ಖಾಯಿಲೆ ದೃಢಪಟ್ಟಿದೆ.

ವ್ಯಕ್ತಿಗೆ ಕಳೆದ ಫೆ.20ಕ್ಕೆ ಜ್ವರ ಹಾಗೂ ಮೈಕೈ ನೋವು, ತಲೆನೋವು ಕಾಣಿಸಿಕೊಂಡಿದ್ದು, ಬಳಿಕ ಸ್ಥಳೀಯ ರೇವಣಕಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದ್ದಾರೆ. ತಪಾಸಣೆಯಿಂದ ಶಂಕೆಗೊಂಡ ವೈದ್ಯರು ಈತನ ರಕ್ತ ಮಾದರಿಯನ್ನು ಶಿವಮೊಗ್ಗದಲ್ಲಿನ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು. ರಕ್ತ ಮಾದರಿಯಲ್ಲಿ ಮಂಗನ ಖಾಯಿಲೆಯ ಸೋಂಕು ದೃಢಪಟ್ಟಿದೆ.

ಇದೀಗ ವ್ಯಕ್ತಿಗೆ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!