- Advertisement -
![]()
- Advertisement -
ಕಾರ್ಕಳ: ನಕ್ಸಲ್ ಚಟುವಟಿಕೆಗಳನ್ನು ಕೈಬಿಟ್ಟು ಮುಖ್ಯವಾಹಿನಿಗೆ ಬಂದಿದ್ದ 6 ಮಂದಿ ನಕ್ಸಲರ ಪೈಕಿ ನಾಲ್ವರನ್ನು ಫೆ. 25ರಂದು ಕಾರ್ಕಳ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರ. ಹಾಗೆಯೇ ಬಾಕಿ ಇರುವ ಪ್ರಕರಣಗಳ ತನಿಖೆ ಬಗ್ಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎನ್ನಲಾಗಿದೆ.
ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಲತಾ (ಮುಂಡಗಾರು ಲತಾ), ಮಾರಪ್ಪ (ಜಯಣ್ಣ), ವನಜಾಕ್ಷಿ (ಜ್ಯೋತಿ) ಹಾಗೂ ಸುಂದರಿ (ಗೀತಾ, ಜೆನ್ನಿ)ಯನ್ನು ಪೊಲೀಸರು ಕಾರ್ಕಳ ನ್ಯಾಯಾಲಯಕ್ಕೆ ಕರೆತಂದು ಹಾಜರುಪಡಿಸಿದರು ಎಂದು ತಿಳಿದು ಬಂದಿದೆ.
- Advertisement -


