Monday, June 8, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಹೃದಯಾಘಾತಕ್ಕೆ ಯುವಕ ಬಲಿ

ಉಪ್ಪಿನಂಗಡಿ; ಹೃದಯಾಘಾತಕ್ಕೆ ಯುವಕ ಬಲಿ

- Advertisement -
- Advertisement -

ಉಪ್ಪಿನಂಗಡಿ; ಹೃದಯಾಘಾತಕ್ಕೆ ಯುವಕ ಬಲಿಯಾಗಿರುವ ಘಟನೆ 34 ನೆಕ್ಕಿಲಾಡಿಯ ಕೊಳಕ್ಕೆ ಎಂಬಲ್ಲಿ ನಡೆದಿದೆ.ಕೊಳಕ್ಕೆ ನಿವಾಸಿ ಕೇಶವ (28) ಮೃತ ಯುವಕ.

ವೈನ್ ಶಾಪ್ ಒಂದರಲ್ಲಿ ಕೇಶವ್ ಕೆಲಸ ಮಾಡುತ್ತಿದ್ದರು. ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.ಅದಕ್ಕೆ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಿಂದ ಮೆಡಿಸನ್ ತೆಗೆದುಕೊಂಡಿದ್ದರು. ಶನಿವಾರ ನಸುಕಿನ ವೇಳೆ ಕೇಶವ ಅವರ ಪತ್ನಿಗೆ ಎಚ್ಚರವಾಗಿದೆ. ಆಗ ಕೇಶವ ಹಾಸಿಗೆಯಲ್ಲಿ ಗೋಡೆಗೆ ಒರಗಿ ಎದೆಗೆ ಕೈಯಿಟ್ಟು ಕೂತ ಸ್ಥಿತಿಯಲ್ಲಿದ್ದರು. ಮಾತನಾಡಿಸಿದರೆ ವುದೇ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಕೇಶವ ಅವರಿಗೆ ಮೂರು ತಿಂಗಳ ಮಗುವಿದೆ. ಕೇಶವ ಅವರು ಪತ್ನಿ ಸಂಧ್ಯಾ ಹಾಗೂ ಮಗುವನ್ನು ಅಗಲಿದ್ದಾರೆ.

- Advertisement -

Latest News

error: Content is protected !!