Sunday, June 14, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಆಪೆ ವಾಹನದಲ್ಲಿ ಅಕ್ರಮ ಗೋ ಸಾಗಾಟ; ಆರೋಪಿಗಳ ಬಂಧನ

ಬೆಳ್ತಂಗಡಿ; ಆಪೆ ವಾಹನದಲ್ಲಿ ಅಕ್ರಮ ಗೋ ಸಾಗಾಟ; ಆರೋಪಿಗಳ ಬಂಧನ

- Advertisement -
- Advertisement -

ಬೆಳ್ತಂಗಡಿ; ಆಪೆ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಗಾಳಿತೋಟ ಎಂಬಲ್ಲಿ ನಡೆದಿದೆ. ಬೆಳ್ತಂಗಡಿಯ ಕಳೆಂಜ ಗ್ರಾಮದ ಲಾಲೂ ವರ್ಕಿ(51), ಇರಾನಿ(65) ಬಂಧಿತರು.

ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ ಪ್ರಶಾಂತ್, ಪಿಸಿ ಮಧು ಬಿ ಹಾಗೂ ಪಿ.ಸಿ ಯೋಗೀಶ್‌ ಅವರೊಂದಿಗೆ ಎಸ್ ಐ ಸಮರ್ಥ್ ಆರ್ ಗಾಣಿಗೇರ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಚಾರ್ಮಾಡಿ, ಕಕ್ಕಿಂಜೆಯಲ್ಲಿ ನೆರಿಯಾ ಗ್ರಾಮದಲ್ಲಿ ರೌಂಡ್ಸ್ ನಲ್ಲಿದ್ದಾಗ ಫೆ.20 ರಂದು ಮಧ್ಯಾಹ್ನ ಸುಮಾರು 1:20 ಗಂಟೆಗೆ ಎಂಬಲ್ಲಿಗೆ ತಲುಪಿದಾಗ ಕಳೆಂಜ ನಂದಗೋಕುಲ ಕಡೆಯಿಂದ ಕಾಯರ್ತಡ್ಕ ಕಡೆಗೆ ಕೆಎ 70 0586 ಆಪೆ ವಾಹನದಲ್ಲಿ ಆರೋಪಿಗಳು ಹಿಂಭಾಗದ ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನ ಬಳಿ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರನ್ನು ಹಗ್ಗದಿಂದ ಬಿಗಿದು ಕಟ್ಟಿ ಜಾನುವಾರಿಗೆ ಯಾವುದೇ ಸುರಕ್ಷತಾ ಕ್ರಮವನ್ನು ವಹಿಸದೇ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!