Friday, June 5, 2026
Homeತಾಜಾ ಸುದ್ದಿದೆಹಲಿಯ ಮುಖ್ಯಮಂತ್ರಿಯಾಗಿ ನಾಳೆ ರೇಖಾ ಗುಪ್ತ ಪ್ರಮಾಣ ವಚನ

ದೆಹಲಿಯ ಮುಖ್ಯಮಂತ್ರಿಯಾಗಿ ನಾಳೆ ರೇಖಾ ಗುಪ್ತ ಪ್ರಮಾಣ ವಚನ

- Advertisement -
- Advertisement -

ದೆಹಲಿಯ ಮುಖ್ಯಮಂತ್ರಿಯಾಗಿ ನಾಳೆ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇನ್ನು ಸಿಎಂ ರೆಸ್ ನಲ್ಲಿ ವಿಜೇಂದರ್ ಗುಪ್ತಾ, ರೇಖಾ ಗುಪ್ತಾ ಮತ್ತು ಜಿತೇಂದರ್ ಮಹಾಜನ್ ಮೂವರ ಹೆಸರು ಕೇಳಿ ಬಂದಿತ್ತು. ಬುಧವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ರೇಖಾ ಗುಪ್ತ ಅವರನ್ನು ಮುಖ್ಯಮಂತ್ರಿಯಾಗಿಸು ತೀರ್ಮಾನ ತೆಗೆದುಕೊಂಡಿದ್ದು ಅದರಂತೆ  ಎಲ್ಲಾ ಪಕ್ಷದ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ.

ನಾಳೆ ಗುರುವಾರ(ಫೆ.20) ಮಧ್ಯಾಹ್ನ 12:35 ಕ್ಕೆ ರಾಮಲೀಲಾ ಮೈದಾನದಲ್ಲಿ ರೇಖಾ ಗುಪ್ತ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು ಅಲ್ಲದೆ ಮೈದಾನದ ಸುತ್ತ ಹೆಚ್ಚಿನ ಭದ್ರತೆಯನ್ನು ಕೈಗೊಳಲಾಗಿದ್ದು ಅರೆಸೇನಾ ಪಡೆಗಳ ಜತೆಗೆ 5,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ರಾಮಲೀಲಾ ಮೈದಾನದಲ್ಲಿ ಹಾಗೂ ಸುತ್ತಮುತ್ತ ನಿಯೋಜಿಸಲಾಗಿದೆ.

- Advertisement -

Latest News

error: Content is protected !!