Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಮದ್ವೆ ಓಡಾಟಕ್ಕೆ ಅಂತಾ ನೀಡಿದ ಕಾರನ್ನು ಸೇಲ್ ಮಾಡಿದ ಸ್ನೇಹಿತ

ಮಂಗಳೂರು; ಮದ್ವೆ ಓಡಾಟಕ್ಕೆ ಅಂತಾ ನೀಡಿದ ಕಾರನ್ನು ಸೇಲ್ ಮಾಡಿದ ಸ್ನೇಹಿತ

- Advertisement -
- Advertisement -

ಮಂಗಳೂರು; ಮಿತ್ರನೊಬ್ಬ ಮದ್ವೆ ಓಡಾಟಕ್ಕೆ ಅಂತಾ ನೀಡಿದ ಕಾರನ್ನು ಸ್ನೇಹಿತ ಸೇಲ್ ಮಾಡಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ತನ್ನ ಸೋದರ ಸಂಬಂಧಿ ಮಹಮ್ಮದ ಇಕ್ಬಾಲ್‌ ಅವರ ಟೊಯೊಟಾ ಫಾರ್ಚುನರ್‌ ಕಾರನ್ನು ಪರಿಚಯದವರಾದ ಉಚ್ಚಿಲ ನಿವಾಸಿ ಮಕ್ಯೂಮ್‌ ಎಂಬಾತ ತನ್ನ ತಂಗಿಯ ಮದುವೆ ಕಾರ್ಯಕ್ರಮದ ಸಲುವಾಗಿ ಓಡಾಟಕ್ಕೆಂದು ಕೊಂಡೊಯ್ದಿದ್ದ. 10 ದಿನಗಳಲ್ಲಿ ಕಾರನ್ನು ಮರಳಿ ನೀಡುವುದಾಗಿ ತಿಳಿಸಿದ್ದ. ನಂತರ ಕಾರನ್ನು ಮರಳಿಸಿಲ್ಲ ಎಂದು ಇಡ್ಯಾದ ಅಬ್ದುಲ್‌ ಸಮೀರ್‌ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾರಿನ ಕುರಿತು ಪ್ರಶ್ನೆ ಮಾಡಿದಾಗ ಅದನ್ನು ಮೈಸೂರಿನ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಅದನ್ನು ಖರೀದಿಸಿದ ವ್ಯಕ್ತಿ ನಕಲಿ ದಾಖಲಾತಿಗಳನ್ನು ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಅಬ್ದುಲ್‌ ಸಮೀರ್‌ ದೂರಿದ್ದಾರೆ.

- Advertisement -

Latest News

error: Content is protected !!