Thursday, June 4, 2026
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು ಬರೋಬ್ಬರಿ 311 ಮಂದಿಗೆ ಕೊರೊನಾ ಸೋಂಕು, ಒಬ್ಬರು ಕೋವಿಡ್ ಗೆ ಬಲಿ, ಉಡುಪಿಯಲ್ಲಿ...

ದಕ್ಷಿಣಕನ್ನಡದಲ್ಲಿಂದು ಬರೋಬ್ಬರಿ 311 ಮಂದಿಗೆ ಕೊರೊನಾ ಸೋಂಕು, ಒಬ್ಬರು ಕೋವಿಡ್ ಗೆ ಬಲಿ, ಉಡುಪಿಯಲ್ಲಿ ಬರೋಬ್ಬರಿ 80 ಕೇಸು

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ಕೊರೊನಾ ಭರ್ಜರಿ ರನ್ ಬಾರಿಸಿದೆ. ಒಂದೇ ದಿನದಲ್ಲಿ ಬರೋಬ್ಬರಿ 311 ಕೇಸುಗಳು ದಾಖಲಾಗಿ ಆತಂಕ ಹೆಚ್ಚಿಸಿವೆ. ಇದೇ ಮೊದಲ ಬಾರಿಗೆ ದಕ್ಷಿಣಕನ್ನಡದಲ್ಲಿ ಇಷ್ಟೊಂದು ಕೇಸುಗಳು ದಾಖಲಾಗಿವೆ. ಹಾಗೇ ಒಬ್ಬರನ್ನು ಕೊರೊನಾ ಬಲಿ ಪಡೆದುಕೊಂಡಿದೆ.

ಇನ್ನು ಸದ್ಯ ಜಿಲ್ಲೆಯಲ್ಲಿ 1704 ಸಕ್ರೀಯ ಪ್ರಕರಣಗಳಿವೆ. ಇದುವರೆಗೂ ಒಟ್ಟು 2797 ಪ್ರಕರಣಗಳು ದಕ್ಷಿಣಕನ್ನಡದಲ್ಲಿ ಕಂಡುಬಂದಿವೆ. ಅದರಲ್ಲಿ 1038 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಂದು ಒಂದೇ ದಿನದಲ್ಲಿ 92 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇಲ್ಲಿಯವರೆಗೆ 53 ಜನರನ್ನು ಕೊರೊನಾ ತನಗೆ ಬಲಿಯಾಗಿಸಿಕೊಂಡಿದೆ.

ಹಾಗೆಯೇ ಉಡುಪಿಯಲ್ಲಿ ಇಂದು 80 ಮಂದಿಗೆ ಕೋವಿಡ್ ದೃಢಪಟ್ಟಿದೆ. ಅಲ್ಲದೇ ಒಂದು ಮೂವರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಇದುವೆರಗೂ ಉಡುಪಿಯಲ್ಲಿ 1980 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 1532 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸದ್ಯ ಕೃಷ್ಣನಗರಿಯಲ್ಲಿ 442 ಕೊರೊನಾ ಸಕ್ರೀಯ ಪ್ರಕರಣಗಳಿವೆ. ಇದುವರೆಗೂ ಜಿಲ್ಲೆಯಲ್ಲಿ ಹೆಮ್ಮಾರಿಗೆ 6 ಜನ ಬಲಿಯಾಗಿದ್ದಾರೆ.

- Advertisement -

Latest News

error: Content is protected !!