Thursday, July 16, 2026
Homeಕರಾವಳಿಮಿಜೋರಾಂನಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲು

ಮಿಜೋರಾಂನಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲು

- Advertisement -
- Advertisement -

ಛಪಾಂಯ್: ಕಳೆದ ಕೆಲವು ದಿನಗಳಿಂದ ದೇಶದ ನಾನಾ ಕಡೆಯಲ್ಲಿ ಕಂಪಿಸುತ್ತಿರುವ ಭೂಮಿ, ಇಂದು ದೇಶದ ಈಶಾನ್ಯ ಭಾಗದ ಮಿಜೋರಾಂ ರಾಜ್ಯದ ಛಾಂಪಾಯ್ ಜಿಲ್ಲೆಯಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.

ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ 9ನೇ ಭೂಕಂಪನ ಇದಾಗಿದೆ. ಛಾಂಪಾಯ್‌ನಿಂದ 33 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು. 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು.

ಇನ್ನು ಹಿಮಾಚಲ ಪ್ರದೇಶದ ಉನಾದಲ್ಲೂ ಲಘು ಭೂಕಂಪನ ಸಂಭವಿಸಿದೆ. 2.3 ತೀವ್ರತೆಯ ಭೂಕಂಪನ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

- Advertisement -

Latest News

error: Content is protected !!