Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚಾರ್ಮಾಡಿ ಅರಣ್ಯ ಇಲಾಖೆಯಿಂದ ಮೃತಪಟ್ಟ ಆನೆಯ ದಫನ ;ಆನೆಯ ಎರಡು ದಂತ ಸ್ವಾಧೀನ...

ಬೆಳ್ತಂಗಡಿ : ಚಾರ್ಮಾಡಿ ಅರಣ್ಯ ಇಲಾಖೆಯಿಂದ ಮೃತಪಟ್ಟ ಆನೆಯ ದಫನ ;ಆನೆಯ ಎರಡು ದಂತ ಸ್ವಾಧೀನ ಪಡಿಸಿಕೊಂಡ ಅಧಿಕಾರಿಗಳು

- Advertisement -
- Advertisement -

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಧರ್ಮಸ್ಥಳ – ಮುಂಡಾಜೆ ಮೀಸಲು ಅರಣ್ಯದ ಅನಾರು ಪ್ರದೇಶದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ  ಫೆ.13 ರಂದು ಮಧ್ಯಾಹ್ನ ಕಂಡು ಬಂದ ಕಾಡಾನೆ ರಾತ್ರಿ ಸುಮಾರು 11 ಗಂಟೆಗೆ ಸಾವನ್ನಪ್ಪಿದ ಘಟನೆ ಹಿನ್ನಲೆ ಫೆ. 14 ರಂದು ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಲಾಯಿತು.

 25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು , ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎನ್ನಲಾಗಿದೆ ‌. ಆನೆಯ ದೇಹದ ಹೊರಗಡೆ ಯಾವುದೇ ಗಾಯವಿಲ್ಲ ದೇಹದ ಒಳಗೆ ಬಹು ಅಂಗಾಂಗ ವೈಫಲ್ಯ ಇರುವುದು ವೈದ್ಯರ ಮರಣೋತ್ತರ ಪರೀಕ್ಷೆ ವೇಳೆ ಕಂಡು ಬಂದಿದೆ ಎಂದು  ಡಿಎಫ್ಓ ಅಂತೋಣಿ ಮರಿಯಪ್ಪ ಮಧ್ಯಮಗಳಿಗೆ ಮಾಹಿತಿ ನೀಡಿದರು.ಭದ್ರತಾ ದೃಷ್ಟಿಯಿಂದ ಆನೆಯ ಎರಡು ದಂತವನ್ನು ತೆಗೆದು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ‌.ಬೆಳ್ತಂಗಡಿ ಡಾ. ರವಿ ಕುಮಾರ್.ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್.ಎಮ್.ಎಸ್ ಮರಣೋತ್ತರ ಪರೀಕ್ಷೆ ನಡೆಸಿದರು.

ಡಿಎಫ್ಓ ಅಂತೋಣಿ ಮರಿಯಪ್ಪ, ಎ.ಸಿ.ಎಫ್ ಕ್ಷೀಫರ್ಡ್ ಲೋಬೋ, ಬೆಳ್ತಂಗಡಿ ಆರ್.ಎಫ್.ಓ ಟಿ.ಎನ್.ತ್ಯಾಗರಾಜ್, ಚಾರ್ಮಾಡಿ ಡಿ.ವೈ.ಆರ್.ಎಫ್‌.ಓ ನಾಗೇಶ್.ಪಿ.ಜಿ. ಬೆಳ್ತಂಗಡಿ ಡಿ.ವೈಆರ್.ಎಫ್.ಓ ರವಿಚಂದ್ರ.ಕೆ, ಸಂತೋಷ್ ದೇವಾಡಿಗ, ಗಸ್ತು ಅರಣ್ಯ ಪಾಲಕ ರವಿ,ಪರಶುರಾಮ,ರವಿ ಕುಮಾರ್, ಅರಣ್ಯ ವೀಕ್ಷಕರಾದ ಗೋಪಾಲ, ಕಿಟ್ಟಣ್ಣ, ಮನೋಹರ್,ಅನಿಲ್, ಚಾಲಕ ಕುಶಲಪ್ಪ ಗೌಡ ಮತ್ತು ದಿವಕರ್,ಸ್ಥಳೀಯರಾದ ಸ್ನೇಕ್ ಅನಿಲ್, ಮುಂಡಾಜೆ ಸಚಿನ್ ಭೀಡೆ,ಜನಾರ್ದನ, ಕೃಷ್ಣಪ್ಪ ಭಾಗಿಯಾಗಿದ್ದರು‌.ಆನೆಯನ್ನು ಸ್ಥಳದಲ್ಲಿಯೇ ಹಿಟಾಚಿ ಮೂಲಕ ಗುಂಡಿ ತೆಗೆದು ಸ್ಥಳೀಯರಿಂದ ಪೂಜೆ ನಡೆಸಿ ನಂತರ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ದಫನ‌ ಮಾಡಲಾಯಿತು.

- Advertisement -

Latest News

error: Content is protected !!