Tuesday, June 9, 2026
Homeಕರಾವಳಿವಿಧಾನಸೌಧದಲ್ಲಿ ಫೆ. 27 ರಿಂದ ಮಾರ್ಚ್ 3ರವರೆಗೆ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ

ವಿಧಾನಸೌಧದಲ್ಲಿ ಫೆ. 27 ರಿಂದ ಮಾರ್ಚ್ 3ರವರೆಗೆ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ

- Advertisement -
- Advertisement -

ಮಂಗಳೂರು: ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ರಾಜ್ಯದ ವಿಧಾನಸಭೆಯ ಸಚಿವಾಲಯದ ವತಿಯಿಂದ ಫೆ. 27 ರಿಂದ ಮಾರ್ಚ್ 3ರವರೆಗೆ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ ನಡೆಯಲಿದೆ.

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ, ‘ವಿಧಾನಸೌಧದ ಸುತ್ತ 150ಕ್ಕೂ ಅಧಿಕ ಸ್ಟಾಲ್ಸ್ ಬರಲಿದ್ದು, ಫೆಸ್ಟಿವಲ್ ನಲ್ಲಿ 80% ಕನ್ನಡ ಪುಸ್ತಕ, 20% ಇತರ ಪುಸ್ತಕಗಳು ಇರಲಿದೆ. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯ ಮೂಲಕ ಬರಹಗಾರರಿಗೆ ಅವಕಾಶವಿರಲಿದೆ. ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ,” ಎಂದರು.

ಇನ್ನು ಶಾಸಕರ ನಿಧಿಯಿಂದ 2 ರಿಂದ 5 ಲಕ್ಷದ ಹಣದಿಂದ ಪುಸ್ತಕ ಖರೀದಿಗೆ ಅವಕಾಶವಿದ್ದು, ಅದನ್ನು ತಮ್ಮ ಕ್ಷೇತ್ರದ ಶಾಲಾ ಕಾಲೇಜುಗಳಿಗೆ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

- Advertisement -

Latest News

error: Content is protected !!