Wednesday, June 24, 2026
Homeಚಿಕ್ಕಮಗಳೂರುರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಸ್ಥಳೀಯರಿಂದ ಅಂತ್ಯ ಸಂಸ್ಕಾರ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಸ್ಥಳೀಯರಿಂದ ಅಂತ್ಯ ಸಂಸ್ಕಾರ

- Advertisement -
- Advertisement -

ಕೊಟ್ಟಿಗೆಹಾರ: ಕೋತಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕೋತಿಯು ಮೃತಪಟ್ಟಿದ್ದು ನಂತರದಲ್ಲಿ ಸ್ಥಳೀಯರು ಸೇರಿ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಫೆ.03 ಸೋಮವಾರದಂದು ನಡೆದಿದೆ.

ಘಟನೆಯ ನಂತರ ಡಿಕ್ಕಿ ಹೊಡೆದ ವಾಹನವು ಸ್ಥಳದಲ್ಲಿ ನಿಲ್ಲಿಸದೆ ಹೋಗಿದ್ದು ತಿಳಿದು ಬಂದಿದೆ.

ಇನ್ನು ಕೋತಿ ಸತ್ತಿರುವ ವಿಚಾರ ಜಾವಳಿ ಗ್ರಾಮದ ಸ್ಥಳೀಯರ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಬಂದು ರಸ್ತೆಯಲ್ಲಿ ಮೃತಪಟ್ಟ ಕೋತಿಗೆ ಧಾರ್ಮಿಕ ವಿಧಿ-ವಿಧಾನದಂತೆ ಅಂತ್ಯಸಂಸ್ಕಾರ ನಡೆಸಿದರು.

- Advertisement -

Latest News

error: Content is protected !!