- Advertisement -
![]()
- Advertisement -
ಮಂಗಳೂರು: ನಗರದ ಕೊಟ್ಟಾರ ಸಮೀಪ ಪ್ರೇತ ಕಾಟ ಅಧಿಕವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನ ಪ್ರೇತ ಉಚ್ಚಾಟನೆ ಹಾಗೂ ಅನ್ಯಪ್ರೇತ ಉಚ್ಛಾಟನೆಗಾಗಿ ನಿಷೇಧ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಸ್ಥಳೀಯರು ಹೇಳುವಂತೆ ಇಲ್ಲಿನ ಅಬ್ಬಕ್ಕನಗರ ಭಾಗದಲ್ಲಿ ಪ್ರೇತಕಾಟ ಅಧಿಕವಾಗಿದೆ ಎನ್ನಲಾಗುತ್ತಿದ್ದು, ಇದರಂತೆ ತಾಂಬೂಲ ಪ್ರಶ್ನೆ ಇಟ್ಟು ಪರಿಶೀಲಿಸಿದಾಗ ಉಚ್ಛಾಟನೆ ಕ್ರಮ ಮಾಡಬೇಕು ಎಂದು ತಿಳಿದುಬಂದಿತ್ತು. ಈ ನಿಟ್ಟಿನಲ್ಲಿ ಉಚ್ಚಾಟನೆ ಕ್ರಮವನ್ನು ಬುಧವಾರ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮವು ನೆರವೇರಿದೆ.
ಈ ವೇಳೆಯಲ್ಲಿ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿರ್ಬಂಧಿಸಿದ್ದರು ಎನ್ನಲಾಗಿದೆ.
- Advertisement -


