Wednesday, June 24, 2026
Homeತಾಜಾ ಸುದ್ದಿರಾತ್ರೋ ರಾತ್ರಿ ಇಂಟರ್‌ ನೆಟ್‌ನಲ್ಲಿ ವೈರಲ್‌ ಆದ ಮೊನಾಲಿಸಾ ಬಾಲಿವುಡ್‌ಗೆ ಎಂಟ್ರಿ; ನಿರ್ದೇಶಕ ಸನೋಜ್ ಮಿಶ್ರಾ ಚಿತ್ರದಲ್ಲಿ ನಟನೆ

ರಾತ್ರೋ ರಾತ್ರಿ ಇಂಟರ್‌ ನೆಟ್‌ನಲ್ಲಿ ವೈರಲ್‌ ಆದ ಮೊನಾಲಿಸಾ ಬಾಲಿವುಡ್‌ಗೆ ಎಂಟ್ರಿ; ನಿರ್ದೇಶಕ ಸನೋಜ್ ಮಿಶ್ರಾ ಚಿತ್ರದಲ್ಲಿ ನಟನೆ

- Advertisement -
- Advertisement -

ಮುಂಬಯಿ: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ರಾತ್ರೋ ರಾತ್ರಿ ಇಂಟರ್‌ ನೆಟ್‌ನಲ್ಲಿ ವೈರಲ್‌ ಆದ  ಮೊನಾಲಿಸಾ ಭೋಸ್ಲೆ ಇದೀಗ ಬಾಲಿವುಡ್ ಗೆ ಕಾಲಿಡಲು ಸಜ್ಜಾಗಿದ್ದಾರೆ. ಇವರನ್ನ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಚಿತ್ರರಂಗಕ್ಕೆ ಕರೆತರಲಿದ್ದಾರೆ.

‘ದಿ ಡೈರಿ ಆಫ್‌ ವೆಸ್ಟ್‌ ಬೆಂಗಾಲ್‌ʼ ಎನ್ನುವ ಸಿನಿಮಾವನ್ನು ಮಾಡಿರುವ ಸನೋಜ್‌ ಮಿಶ್ರಾ ತನ್ನ ಮುಂದಿನ ಸಿನಿಮಾದಲ್ಲಿ ಮೊನಾಲಿಸಾ ಅವರಿಗೆ ಅವಕಾಶ ನೀಡಲಿದ್ದು, ಈ ಬಗ್ಗೆ ಈಗಾಗಲೇ ಸನೋಜ್‌ ಅವರು ಮೊನಾಲಿಸಾ ಅವರ ತಂದೆಯೊಂದಿಗೆ ಫೋನ್ ಮೂಲಕ ಮಾತನಾಡಿದ್ದು, ಬುಧವಾರ(ಜ.29ರಂದು) ಮಹೇಶ್ವರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.

https://x.com/khabartrends/status/1884793285425684819?

ಸಿನಿಮಾದಲ್ಲಿ ಮೊನಾಲಿಸಾ ಅವರ ಪಾತ್ರ ಸೇನಾಯೋಧನ ಮಗಳ ಪಾತ್ರವಾಗಿದ್ದು, ಮಣಿಪುರದ ನಿವೃತ್ತ ಸೇನಾ ಯೋಧನ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಧಾರಿಯ ಕನಸು ಕೂಡ ಸೇನೆಗೆ ಸೇರುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಆಕೆ ಕನಸು ನನಸು ಮಾಡಿಕೊಳ್ಳಲು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾಳೆ ಮತ್ತು ಅವಳು ಹೇಗೆ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದು ನಿರ್ದೇಶನ ಸನೋಜ್‌ ಅವರು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

‘ದಿ ಡೈರಿ ಆಫ್ ಮಣಿಪುರʼ 20 ಕೋಟಿ ಬಜೆಟ್‌ನಲ್ಲಿ ಬರಲಿದ್ದು, ಮೊನಲಿಸಾ ಅವರ ಪಾತ್ರಕ್ಕಾಗಿ ಅವರಿಗೆ ನಟನಾ ತರಬೇತಿ ನೀಡಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

Latest News

error: Content is protected !!