Thursday, June 4, 2026
Homeಅಪರಾಧಭದ್ರಾ ನದಿ ಸೇತುವೆ ಬಳಿ ಚಿರತೆಯ ಮೃತದೇಹ ಪತ್ತೆ; ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮೃತದೇಹ ವಶಕ್ಕೆ

ಭದ್ರಾ ನದಿ ಸೇತುವೆ ಬಳಿ ಚಿರತೆಯ ಮೃತದೇಹ ಪತ್ತೆ; ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮೃತದೇಹ ವಶಕ್ಕೆ

- Advertisement -
- Advertisement -

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಬಾರಂದೂರು ಸಮೀಪ ಭದ್ರಾ ನದಿ ಸೇತುವೆ ಬಳಿ ಜ.27 ಸೋಮವಾರದಂದು ಚಿರತೆಯ ಮೃತದೇಹ ಪತ್ತೆಯಾಗಿದ್ದು, ಚಿರತೆಯನ್ನು ಕೊಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರು ಚಿರತೆ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಚಿರತೆ ಓಡಾಟವಿಲ್ಲದೇ ಇರುವುದರಿಂದ ಇಲ್ಲಿ ಹೇಗೆ ಚಿರತೆ ಬಂತು ಎನ್ನುವ ಸಂಶಯ ಶುರುವಾಗಿದೆ. 

ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಭದ್ರಾವತಿ ವಲಯ ಡಿಎಫ್ಒ ಆಶೀಶ್‌ ರೆಡ್ಡಿ ತಿಳಿಸಿದ್ದಾರೆ.

- Advertisement -

Latest News

error: Content is protected !!