Saturday, June 13, 2026
Homeಕರಾವಳಿಬೆಳ್ತಂಗಡಿ: ಬಾಣಂತಿಗೆ ಕೊರೋನಾ ದೃಢವಾಗುತ್ತಿದ್ದಂತೆ ಆಸ್ಪತ್ರೆಯಿಂದಲೇ ಕರೆದೊಯ್ದ ಮನೆಯವರು !

ಬೆಳ್ತಂಗಡಿ: ಬಾಣಂತಿಗೆ ಕೊರೋನಾ ದೃಢವಾಗುತ್ತಿದ್ದಂತೆ ಆಸ್ಪತ್ರೆಯಿಂದಲೇ ಕರೆದೊಯ್ದ ಮನೆಯವರು !

- Advertisement -
- Advertisement -

ಬೆಳ್ತಂಗಡಿ: ಬಾಣಂತಿ ಮಹಿಳೆಯೊಬ್ಬರಿಗೆ ಕೊರೋನಾ ದೃಢವಾಗುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಯಿಂದ ಬಲವಂತವಾಗಿ ಕರೆದೊಯ್ದ ಘಟನೆ ಬೆಳ್ತಂಗಡಿಯ ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ .

ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ ಇಬ್ಬರು ಗರ್ಭಿಣಿ ಮಹಿಳೆಯರು ಮಗುವಿಗೆ ಜನ್ಮ ನೀಡಿದ್ದು, ಕೋವಿಡ್ ತಪಾಸಣೆ ಹಿನ್ನಲೆಯಲ್ಲಿ ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು.

ಇಂದು ಸಂಜೆ ಇಬ್ಬರು ಬಾಣಂತಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈ ವಿಚಾರ ಆಸ್ಪತ್ರೆಯ ನರ್ಸ್ ಮಹಿಳೆಯರಿಬ್ಬರಿಗೆ ತಿಳಿಸಿದ್ದಾರೆ. ಈ ವಿಚಾರವನ್ನು ಮಹಿಳೆ ಮನೆಯವರಿಗೂ ತಿಳಿಸಿದ್ದು ಮನೆಯ ಸದಸ್ಯರು ಇಂದು ರಾತ್ರಿ 9:30 ರ ಸಮಾರಿಗೆ ಮಾರುತಿ 800 ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದು ಗೇಟಿನ ಬೀಗ ಮುರಿದು ಮಹಿಳೆ ಮತ್ತು ಮಗುವನ್ನು ಕಾರಿನಲ್ಲಿ ಕೂರಿಸಿ ಕರೆದೊಯ್ಯಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಆಸ್ಪತ್ರೆಯಿಂದ ತೆರಳಿರುವ ಬಾಣಂತಿ ಮಹಿಳೆಯ ವಿಳಾಸ ಮತ್ತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

- Advertisement -

Latest News

error: Content is protected !!