Thursday, June 4, 2026
Homeಕರಾವಳಿಮಂಗಳೂರು: ನಿಧಿ ಸಿಕ್ಕಿದೆ ಎಂದು ಹೇಳಿ ನಕಲಿ ಚಿನ್ನ ನೀಡಿ ವಂಚಿಸಲು ಯತ್ನಿಸಿದ ಮಹಿಳೆಯನ್ನು ರೆಡ್...

ಮಂಗಳೂರು: ನಿಧಿ ಸಿಕ್ಕಿದೆ ಎಂದು ಹೇಳಿ ನಕಲಿ ಚಿನ್ನ ನೀಡಿ ವಂಚಿಸಲು ಯತ್ನಿಸಿದ ಮಹಿಳೆಯನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು

- Advertisement -
- Advertisement -

ಮಂಗಳೂರು: ನಿಧಿ ಸಿಕ್ಕಿದೆ ಎಂದು ಹೇಳಿ ನಕಲಿ ಚಿನ್ನ ನೀಡಿ ವಂಚಿಸಲು ಯತ್ನಿಸಿದ ಮಹಿಳೆಯನ್ನು ರೆಡ್ ಹ್ಯಾಂಡಾಗಿ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರು ನಗರದ ಗರೋಡಿ ದೇವಸ್ಥಾನದ ಬಳಿ ನಡೆದಿದೆ.

ಗರೋಡಿ ಬಳಿ ಇರುವ ರೆಡ್ ಬಿಲ್ಡಿಂಗ್ ಬಳಿ ಘಟನೆ ನಡೆದಿದೆ. ಮಹಿಳೆ ಮೂಲತ ಉತ್ತರ ಭಾರತವಳಾಗಿದ್ದು ಹಿಂದಿ ಹಿಂದಿಯಲ್ಲಿ ಮಾತನಾಡುತ್ತಿದ್ದಳು. ಇವರದ್ದೊಂದು ತಂಡವಿದ್ದು ಜಾತ್ರೆಯಲ್ಲಿ ಈ ಜನರು ಗುಂಪು ಅಲ್ಲಲ್ಲಿ ನಿಧಿಯಿಂದ ಚಿನ್ನಾಭರಣ ಸಿಕ್ಕಿದೆ ಎಂದು ಸಾಬೀತುಪಡಿಸಲು ನಿಜವಾದ ಬಂಗಾರವನ್ನು ತೋರಿಸಿರುತ್ತಿದ್ದರು. ಜನರು ಯಾಮಾರಿದ್ದಾರೆ ಅಂತಾ ಗೊತ್ತಾಗುತ್ತಿದ್ದಂತೆ ನಕಲಿ ಚಿನ್ನವನ್ನು ತೋರಿಸಿ ಮೋಸಮಾಡುತ್ತಿದ್ದರು.

ಅದರಂತೆ ತಂಡ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ. ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು. ಆದ್ರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆಸಿವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಅಂತ ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದ್ರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಿದ್ದು ಈ ಹಗ್ಗೆ ಎಚ್ಚರವಹಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಇನ್ನು ಮಹಿಳೆಯನ್ನು ವಶಕ್ಕೆ ಪಡೆದಿರುವ ಕಂಕನಾಡಿ ನಗರ ಪೊಲಿಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!