Monday, June 15, 2026
Homeಕರಾವಳಿಬಿಗ್ ಬಾಸ್ ಮನೆಯಲ್ಲಿ ಮತ್ತೆ ತನ್ನ ಕಾರ್ಣಿಕ ತೋರಿದ ಕೊರಗಜ್ಜ; ಅಜ್ಜನನ್ನು ನೆನೆಯುತ್ತಿದ್ದಂತೆ ಧನ್ ರಾಜ್...

ಬಿಗ್ ಬಾಸ್ ಮನೆಯಲ್ಲಿ ಮತ್ತೆ ತನ್ನ ಕಾರ್ಣಿಕ ತೋರಿದ ಕೊರಗಜ್ಜ; ಅಜ್ಜನನ್ನು ನೆನೆಯುತ್ತಿದ್ದಂತೆ ಧನ್ ರಾಜ್ ಸೇಫ್

- Advertisement -
- Advertisement -

ಬೆಂಗಳೂರು; ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕೊರಗಜ್ಜ ತನ್ನ ಕಾರ್ಣಿಕ ತೋರಿಸಿದ್ದಾರೆ. ಎಲಿಮಿನೇಷನ್ ತೂಗುಗತ್ತಿಯಡಿ ನಿಂತಿದ್ದ ಧನ್ ರಾಜ್ ಆಚಾರ್ ಅಜ್ಜನನ್ನು ನೆನೆಯುತ್ತಿದ್ದಂತೆ ಸೇಫ್ ಆಗಿದ್ದಾರೆ.

ಈ ಹಿಂದೆ ಟಾಸ್ಕ್  ವೇಳೆ ಚೈತ್ರಾ ಕುಂದಾಪುರ ಅರು ತಮ್ಮ ಉಂಗುರವನ್ನು ಕಳೆದುಕೊಂಡಿದ್ದರು. ಅವರು ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಕೆಲವೇ ಹೊತ್ತಲ್ಲೇ ಅವರಿಗೆ ಅವರ ಉಂಗುರ ಸಿಕ್ಕಿತ್ತು. ಇದೀಗ ಧನ್ ರಾಜ್ ವಿಚಾರದಲ್ಲೂ ಕೊರಗಜ್ಜ ತನ್ನ ಕಾರ್ಣಿಕ ತೋರಿಸಿದ್ದಾರೆ. 

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯದಾಗಿ ಚೈತ್ರ ಕುಂದಾಪುರ ಮತ್ತು ಧನರಾಜ್ ಅವರು ಉಳಿದುಕೊಂಡಿದ್ದರು. ಆಗ ಬಿಗ್ ಬಾಸ್ ಇಬ್ಬರಲ್ಲಿ ಯಾರು ಸೇವ್ ಆಗಿದ್ದಾರೆ ಅನ್ನೋದನ್ನು ತಿಳಿಸೋದಕ್ಕೆ ಟಾಸ್ಕ್ ಒಂದನ್ನು ಕೊಡ್ತಾರೆ. ಅದರಂತೆ ಕಿಚ್ಚ ಸುದೀಪ್ ಅವರು ಈ ಮನೆಯಲ್ಲಿ ಎರಡು ಎನ್ವಲಪ್ ಇದೆ . ಅದರಲ್ಲಿ ಸೇಫ್,ಯಾರು ಔಟ್ ಅನ್ನೋದು ಇದೆ. ಅದನ್ನು ಹುಡುಕಾಡಿ ಎನ್ನುತ್ತಾರೆ.

ಹೀಗೆ ಪತ್ರ ಹುಡುಕುವಾಗ ಧನರಾಜ್ ಸ್ವಾಮಿ ಕೊರಗಜ್ಜ ಎಂದು ಪ್ರಾರ್ಥಿಸುತ್ತಾರೆ. ಕೊನೆಗೆ ಚೈತ್ರಾಗೆ ಎನ್ವಲಪ್ ಸಿಗುತ್ತೆ. ಅವರು ಎಲಿಮಿನೇಟ್ ಆಗಿದ್ದಾರೆ ಅನ್ನೋದು ಅದ್ರಲ್ಲಿ ಇರುತ್ತೆ. ಧನ್ ರಾಜ್ ಸೇಫ್ ಆಗ್ತಾರೆ. ಆ ಮೂಲಕ ತನ್ನನ್ನು ನಂಬಿದವರನ್ನು  ಕೊರಗಜ್ಜ ಕೈ ಬಿಡಲ್ಲ ಅನ್ನೋದನ್ನು ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ನಿರೂಪಿಸಿದ್ದಾರೆ

- Advertisement -

Latest News

error: Content is protected !!