Wednesday, June 3, 2026
Homeಕರಾವಳಿತುಳುನಾಡಿನ ಜಾನಪದ ಕ್ರೀಡೆ ಕಂಡು‌ ಸಿಎಂ ಫುಲ್‌ ಖುಷ್; ತುಳು ಭಾಷೆಯನ್ನ ಎರಡನೇ‌ ಭಾಷೆಯನ್ನಾಗಿಸಲು ಸಿಎಂ...

ತುಳುನಾಡಿನ ಜಾನಪದ ಕ್ರೀಡೆ ಕಂಡು‌ ಸಿಎಂ ಫುಲ್‌ ಖುಷ್; ತುಳು ಭಾಷೆಯನ್ನ ಎರಡನೇ‌ ಭಾಷೆಯನ್ನಾಗಿಸಲು ಸಿಎಂ ಆಶ್ವಾಸನೆ

- Advertisement -
- Advertisement -

ಮಂಗಳೂರು: ಇಲ್ಲಿನ ನರಿಂಗಾನ ಎಂಬಲ್ಲಿ ಲವ-ಕುಶ ಜೋಡುಕರೆ ಕಂಬಳವನ್ನು ಕಳೆದ ಮೂರು ವರ್ಷಗಳಿಂದ ಅದ್ದೂರಿಯಾಗಿ ಸ್ಪೀಕರ್ ಯು.ಟಿ.ಖಾದರ್ ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಪ್ರಸಕ್ತ ವರ್ಷದ ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಆಗಮಿಸಿದ್ದರು.

ಸಿದ್ದರಾಮಯ್ಯ ಅವರು ಕಂಬಳ ಕೂಟದಲ್ಲಿ ಕಂಬಳ ಪೇಟಾ ತೊಟ್ಟು ಮಿಂಚಿದರು. ಅವರನ್ನು ಆರತಿ ಬೆಳಗಿ, ಸಿಡಿಮದ್ದು ಸಿಡಿಸಿ ಅದ್ದೂರಿ ಸ್ವಾಗತ ನೀಡಲಾಯಿತು. ಕಂಬಳ ಪೇಟಾ ತೊಡಿಸಿ, ಬೆಳ್ಳಿ ನೊಗ, ಬೆಳ್ಳಿಯ ಹಿಡಿಯ ಬೆತ್ತ ನೀಡಿ ಗೌರವಿಸಲಾಯಿತು. ಕಂಬಳ ಕಂಡು ಆನಂದಿಸಿದ ಸಿಎಂ, ಹಿಂದೆ ಕಂಬಳ ನಿಂತಾಗ ನಾವೇ ನಿಷೇಧ ತೆರವುಗೊಳಿಸಿದ್ದು. ಕರಾವಳಿಯ 24 ಕಂಬಳ ನಡೆಸಲು ಪ್ರತಿ ಕಂಬಳಕ್ಕೆ 5 ಲಕ್ಷ ಸರ್ಕಾರ ನೀಡಿದೆ. ಎಲ್ಲ ಭಾಷೆ ಧರ್ಮ, ಸಂಸ್ಕೃತಿಯವರು ಭಾಗವಹಿಸುವ ಕಂಬಳವನ್ನು ನಾವು ಉಳಿಸಿ ಬೆಳೆಸಬೇಕು. ತುಳು ಭಾಷೆಯನ್ನು ಎರಡನೇ ಭಾಷೆ ಮಾಡಬೇಕು ಎನ್ನುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು.

ಸಿಎಂ ಸಿದ್ದುಗೆ ಸಚಿವ ದಿನೇಶ್ ಗುಂಡೂರಾವ್, ರಹಿಮಾನ್ ಖಾನ್ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಸಿಎಂ ಅವರಲ್ಲಿ ಕಂಬಳಕ್ಕೆ ಪ್ರೋತ್ಸಾಹ ನೀಡಿ, ಸರ್ಕಾರ ಓಟಗಾರಿಗೆ ವಿಮೆ ನೀಡಬೇಕು ಎಂದು ಕಂಬಳ ಸಮಿತಿಯವರು ಮನವಿ ಸಲ್ಲಿಸಿದರು.

- Advertisement -

Latest News

error: Content is protected !!