- Advertisement -
![]()
- Advertisement -
ಕಡಬ: ಮಲಗಿದಲ್ಲಿಯೇ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರಿನಲ್ಲಿ ನಡೆದಿದೆ. ಕೇರಳ ಮೂಲದ ತಂಗಚ್ಚನ್ (70) ಮೃತ ವ್ಯಕ್ತಿ.
ತಂಗಚ್ಚನ್ ಅಲಂಕಾರು ಪರಿಸರದಲ್ಲಿ ಸುಮಾರು ಮೂರು ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಜ. 9 ರಂದು ಮುಂಜಾನೆ ಅಸೌಖ್ಯಗೊಂಡು ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಮೃತ ವ್ಯಕ್ತಿ ತಂಗಚ್ಚನ್ ಎಂದು ಹೆಸರು ಹೇಳುತ್ತಿದ್ದು ಆತನ ವಿಳಾಸ ತಿಳಿದು ಬಂದಿರುವುದಿಲ್ಲ ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಬೂಬುಕ್ಕರ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಮೃತರ ಬಗ್ಗೆ ಯಾವುದಾದರೂ ಮಾಹಿತಿ ದೊರೆತಲ್ಲಿ ಅಥವಾ ಬೇರೆ ಯವುದಾದರೂ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾದಲ್ಲಿ ಕಡಬ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಠಾಣಾ ಎಸ್.ಐ ಅಭಿನಂದನ್ ಅವರು ಪ್ರಕಟಣೆ ಹೊರಡಿಸಿದ್ದರು.. ಇದೀಗ ಮೃತ ವ್ಯಕ್ತಿಯ ಕುಟುಂಬಸ್ಥರು ಸಂಪರ್ಕಕ್ಕೆ ಸಿಕ್ಕಿರುವುದಾಗಿ ತಿಳಿದು ಬಂದಿದೆ.
- Advertisement -


