Thursday, June 4, 2026
Homeತಾಜಾ ಸುದ್ದಿಇಸ್ರೋ ನೂತನ ಅಧ್ಯಕ್ಷರಾಗಿ ತಮಿಳುನಾಡು ಮೂಲದ ವಿ.ನಾರಾಯಣನ್‌ ನೇಮಕ

ಇಸ್ರೋ ನೂತನ ಅಧ್ಯಕ್ಷರಾಗಿ ತಮಿಳುನಾಡು ಮೂಲದ ವಿ.ನಾರಾಯಣನ್‌ ನೇಮಕ

- Advertisement -
- Advertisement -

ಬೆಂಗಳೂರು: ಕೇಂದ್ರ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮುಂದಿನ ನೂತನ ಮುಖ್ಯಸ್ಥರನ್ನಾಗಿ ತಮಿಳುನಾಡು ಮೂಲದ ಡಾ.ವಿ.ನಾರಾಯಣನ್‌ ಅವರನ್ನು ನೇಮಕ ಮಾಡಿದೆ. 

ಡಾ.ವಿ.ನಾರಾಯಣನ್‌ ಅವರು ಜನವರಿ 14ರಂದು ಅಧಿಕಾರ ಸ್ವೀಕರಿಸಲಿದ್ದು, ಎರಡು ವರ್ಷಗಳ ಕಾಲದ ಅವಧಿಗೆ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆಯ್ಕೆ ಸಮಿತಿಯ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟ ಅಂಕಿತ ಹಾಕಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಹಿರಿಯ ವಿಜ್ಞಾನಿಯಾಗಿರುವ ವಿ. ನಾರಾಯಣನ್‌ ಅವರು ಪ್ರಸ್ತುತ ಕೇರಳದ ವಾಲಿಯಾಮಾಲಾದ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್ಸ್‌ ಸೆಂಟರ್‌ನಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!