Thursday, June 4, 2026
Homeಕರಾವಳಿಉಡುಪಿಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕದಿಯುತ್ತಿದ್ದಾಗ ಸಿಕ್ಕಿ ಬಿದ್ದ ಕಳ್ಳ

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕದಿಯುತ್ತಿದ್ದಾಗ ಸಿಕ್ಕಿ ಬಿದ್ದ ಕಳ್ಳ

- Advertisement -
- Advertisement -

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕದಿಯುತ್ತಿದ್ದಾಗ ಕಳ್ಳ ಸಿಕ್ಕಿ ಬಿದ್ದ ಘಟನೆ ನಡೆದಿದೆ.ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಮೀನು ತುಂಬಿದ್ದ  ಬೋಟ್‌ನಿಂದ ಕಳ್ಳರು ಸುಮಾರು 15 ಸಾವಿರ ರೂ. ಬೆಲೆ ಬಾಳುವ ಉತ್ತಮ ಜಾತಿಯ ಮೀನನ್ನು ಕದಿಯಲು ಮುಂದಾದಾಗ ಓರ್ವ ಕಳ್ಳ ಬೋಟ್‌ನ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾನೆ.  

ರಾತ್ರಿ ಸುಮಾರು 12 ಗಂಟೆ ವೇಳೆಗೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗೆ ಮೂವರು ಬಂದು ಬೋಟ್‌ನ ಕಾರ್ಮಿಕರು ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿ ಬೋಟ್‌ನ ಸ್ಟೋರೇಜ್‌ನ ಮುಚ್ಚಳ ತೆರೆದು ಅದರೊಳಗೆ ಒಬ್ಬನನ್ನು ಇಳಿಸಿದ್ದರು. ಅಲ್ಲಿಂದ ಕಳವು ಮಾಡುವಾಗ ಬೋಟ್‌ನ ಕಾರ್ಮಿಕನೋರ್ವನಿಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದ. ಬೋಟ್‌ನ ಮೇಲೆ ಇದ್ದವರಲ್ಲಿ ಇಬ್ಬರು ಓಡಿ ಹೋಗಿದ್ದು, ಒಬ್ಬ ಸ್ಟೋರೇಜ್‌ನ ಒಳಗೆ ಸಿಕ್ಕಿ ಹಾಕಿಕೊಂಡಿದ್ದ. ಬೋಟ್‌ನ ಕಾರ್ಮಿಕರು ಆತನನ್ನು ಹಿಡಿದು ವಿಚಾರಿಸಿ ಬೋಟು ಮಾಲೀಕರಿಗೆ ಒಪ್ಪಿಸಿದ್ದಾರೆ. ಈ ಮೂವರು ಗದಗ ಮೂಲದವರೆಂದು ತಿಳಿದು ಬಂದಿದೆ.

- Advertisement -

Latest News

error: Content is protected !!