Thursday, June 4, 2026
Homeಕರಾವಳಿಆರು ಜನ ನಕ್ಸಲ್ ಶರಣಾಗತಿ ಮಾಡುವ ಪ್ರಕ್ರಿಯೆ ಪ್ರಕರಣ: ಮೂವರು ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯರು...

ಆರು ಜನ ನಕ್ಸಲ್ ಶರಣಾಗತಿ ಮಾಡುವ ಪ್ರಕ್ರಿಯೆ ಪ್ರಕರಣ: ಮೂವರು ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯರು ಈಗ ರಹಸ್ಯ ಸ್ಥಳಕ್ಕೆ ಪ್ರಯಾಣ

- Advertisement -
- Advertisement -

ಮಂಗಳೂರು: ಆರು ಜನ ನಕ್ಸಲ್ ಶರಣಾಗತಿ ಮಾಡುವ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮೂವರು ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯರು ಜ.6 ರಂದು(ಈಗ) ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಮೂವರು ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯರು ಈಗ ರಹಸ್ಯ ಸ್ಥಳಕ್ಕೆ ತೆರಳಿದ್ದು, ಶರಣಾಗತಿಯಾಗುವ ಆರು ಜನ ನಕ್ಸಲ್ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಶರಣಾಗಲಿರುವ ನಕ್ಸಲರ ಜೊತೆ ಶರಣಾಗತಿ ಸಮಿತಿಯ ಸದಸ್ಯರಾದ ಪಾರ್ವತೀಶ್ ಬಿಳಿದಾಳೆ, ಬಂಜಗೆರೆ ಜಯಪ್ರಕಾಶ್, ಕೆ. ಪಿ. ಶ್ರೀಪಾಲ್ ಸಭೆ ನಡೆಸಲಿದ್ದಾರೆ.

ಸಮಿತಿಯ ಮೂವರು ಸದಸ್ಯರು ಈಗಾಗಲೇ ಪಶ್ಚಿಮ ಘಟ್ಟದ ಕಡೆ ಪ್ರಯಾಣ ಬೆಳೆಸಿದ್ದಾರೆ.ಪಶ್ಚಿಮ ಘಟ್ಟದ ರಹಸ್ಯ ಸ್ಥಳದಲ್ಲಿ ಜ.6 ರಂದು (ಇಂದು) ರಾತ್ರಿ ಸಭೆ ನಡೆಸಲಿದ್ದಾರೆ. ಆರು ಜನ ನಕ್ಸಲ್ ನಾಯಕರು ಶರಣಾಗತಿ ಬಗ್ಗೆ ನಾಳೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇಂದಿನ ಸಭೆಯಲ್ಲಿ ಯಾರೆಲ್ಲ ಶರಣಾಗುತ್ತಾರೆ ಯಾವ ದಿನಾಂಕ ,ಸಮಯ ಬಗ್ಗೆ ತಿಳಿಯಲಿದೆ.

- Advertisement -

Latest News

error: Content is protected !!