Thursday, June 4, 2026
Homeಅಪರಾಧಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಿಂಕ್ ವೊಂದನ್ನು ಒತ್ತಿ 12.46 ಲಕ್ಷ ರೂ. ಹಣ ಕಳೆದುಕೊಂಡ ಯುವತಿ

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಿಂಕ್ ವೊಂದನ್ನು ಒತ್ತಿ 12.46 ಲಕ್ಷ ರೂ. ಹಣ ಕಳೆದುಕೊಂಡ ಯುವತಿ

- Advertisement -
- Advertisement -

ಉಡುಪಿ: ಯುವತಿಯೋರ್ವಳುಇನ್‌ಸ್ಟಾಗ್ರಾಂ ಖಾತೆಗೆ ಬಂದ ವರ್ಕ್‌ ಪ್ರಮ್‌ ಹೋಮ್‌ ಲಿಂಕ್‌ ಅನ್ನು ಒತ್ತಿ 12.46 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.

ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ, ಹಣ ಕಳೆದುಕೊಂಡ ಯುವತಿ ಶಿವಳ್ಳಿ ಗ್ರಾಮದ ಸಪ್ನ (28) ಎಂದು ತಿಳಿದು ಬಂದಿದೆ.

ಇವರ ಇನ್‌ಸ್ಟಾಗ್ರಾಂ ಖಾತೆಗೆ ವರ್ಕ್‌ ಪ್ರಮ್‌ ಹೋಮ್‌ ಎನ್ನುವ ಲಿಂಕ್‌ ವೊಂದು ಬಂದಿದ್ದು, ಅದನ್ನವರು ಓಪನ್‌ ಮಾಡಿರುತ್ತಾರೆ. ಆಗ ಯುವತಿಗೆ ಆ ಪ್ಲಾಟ್‌ಫಾರ್ಮ್ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು. ಹುಡುಗಿ ಆ ಲಿಂಕ್ ಅನ್ನು ನಂಬಿ ಹೂಡಿಕೆ ಮಾಡಿದ್ದು, ಅದಕ್ಕೆ ಪ್ರತಿಫಲ ಎನ್ನುವಂತೆ ಯುವತಿಗೆ 50ರೂ. ಕಮಿಷನ್‌ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್‌ ಬರುವುದಾಗಿ ನಂಬಿ ಡಿ.9ರಿಂದ ಡಿ.28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಫೋಪ್‌ ಪೇ, ಪೇಟಿಎಂ ಹಾಗೂ ಕ್ಯಾಶ್‌ ಡೆಪಾಸಿಟ್‌ ಮೂಲಕ ಒಟ್ಟು 12,46,000 ರೂ. ಹಣವನ್ನು ಹೂಡಿಕೆ ಮಾಡಿದ್ದು, ಹಣ ವಾಪಸ್‌ ಸಿಗದೆ ಮೋಸ ಹೋಗಿದ್ದಾರೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!