Saturday, June 6, 2026
Homeತಾಜಾ ಸುದ್ದಿಜಮ್ಮು ಕಾಶ್ಮೀರದಲ್ಲಿ 10 ದಿನಗಳೊಳಗೆ ಮತ್ತೊಂದು ಅವಘಡ; ಸೇನಾ ಟ್ರಕ್ ದುರಂತದಲ್ಲಿ 4 ಯೋಧರು ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ 10 ದಿನಗಳೊಳಗೆ ಮತ್ತೊಂದು ಅವಘಡ; ಸೇನಾ ಟ್ರಕ್ ದುರಂತದಲ್ಲಿ 4 ಯೋಧರು ಹುತಾತ್ಮ

- Advertisement -
- Advertisement -

ಕೆಲವು ದಿನಗಳ ಹಿಂದಷ್ಟೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ದುರಂತದಲ್ಲಿ ಯೋಧರು ಸಾವನ್ನಪ್ಪಿದ್ದು, ಇದೀಗ ಅಂತಹದ್ದೇ ಮತ್ತೊಂದು ಅವಘಡ ಜ.05 ಶನಿವಾರದಂದು ನಡೆದಿದ್ದು, ದುರಂತದಲ್ಲಿ 4 ಯೋಧರು ಹುತಾತ್ಮರಾಗಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಘಟನೆಯು ಬಂಡಿಪೋರ್ ನ ಸದರ್ ಕೂಟ್ ಪಯೆನ್ ಪ್ರದೇಶದ ಬಳಿ ತೀಕ್ಷ್ಣವಾದ ತಿರುವಿನಲ್ಲಿ ನಡೆದಿದ್ದು, ಸೇನಾ ಟ್ರಕ್ ನಿಯಂತ್ರಣ ತಪ್ಪಿ ಗುಡ್ಡದಿಂದ ಉರುಳಿದ ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಎಲ್ಲಾ ಸೈನಿಕರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಲ್ಲಿ ನಾಲ್ವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನುಳಿದ ಮೂವರು ಯೋಧರ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೇನಾ ವಾಹನ ಟ್ರಕ್ ದುರಂತದ ಘಟನೆಯಲ್ಲಿ ಯಾವುದೇ ಉಗ್ರರ ಪಾತ್ರವನ್ನು ಸೇನೆ ತಳ್ಳಿಹಾಕಿದೆ.

- Advertisement -

Latest News

error: Content is protected !!