- Advertisement -
![]()
- Advertisement -
ಕಾಸರಗೋಡು: ರಸ್ತೆ ನಿರ್ಮಿಸುವ ವಿವಾದದ ಹಿನ್ನೆಲೆಯಲ್ಲಿ ಜಗಳ ನಡೆದು ಮೂವರು ಗಾಯಗೊಂಡ ಘಟನೆ ನಡೆದಿದೆ.
ಘಟನೆಯು ಎಣ್ಮಕಜೆ ಮುಳಿಯಾಲದಲ್ಲಿ ನಡೆದಿದ್ದು, ಇಲ್ಲಿನ ಮನೆಯೊಂದರ ಬಳಿಯಿಂದ ರಸ್ತೆ ನಿರ್ಮಿಸುವ ಸಲುವಾಗಿ ವಿವಾದದ ನಡೆದಿದೆ. ಗಲಾಟೆಯಲ್ಲಿ ಮುಳಿಯಾಲ ನಿವಾಸಿ ಸುರೇಶ್ ರೈ, ಅವರ ಜತೆಗಿದ್ದ ನಾರಾಯಣ ನಾಯ್ಕ ಮತ್ತು ಲಕ್ಷ್ಮೀ ಗಾಯಗೊಂಡಿದ್ದಾರೆ. ಈ ಬಗ್ಗೆ ಸುರೇಶ್ ರೈ ನೀಡಿದ ದೂರಿನಂತೆ ಬಾಲಕೃಷ್ಣ ನಾಯ್ಕ, ರಾಮಚಂದ್ರ ನಾಯ್ಕ, ರವಿ ನಾಯ್ಕ ಮತ್ತು ವಿಜಯಲಕ್ಷ್ಮೀ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -


