Friday, May 17, 2024
Homeತಾಜಾ ಸುದ್ದಿಕೊರೊನಾ ಟೆಸ್ಟ್ ಗೆ ಕಾಡುತ್ತಿದೆ ಸರ್ಕಾರಿ ಲ್ಯಾಬ್ ಗಳ ಕೊರತೆ

ಕೊರೊನಾ ಟೆಸ್ಟ್ ಗೆ ಕಾಡುತ್ತಿದೆ ಸರ್ಕಾರಿ ಲ್ಯಾಬ್ ಗಳ ಕೊರತೆ

spot_img
- Advertisement -
- Advertisement -

ಬೆಂಗಳೂರು : ಒಂದು ಕಡೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಆತಂಕಕ್ಕೆ ಕಾರಣವಾಗಿದ್ದರೆ ಮತ್ತೊಂದು ಕಡೆ ಸರ್ಕಾರಿ ಆಸ್ಪತ್ರೆಗಳ ಪಾಡು ದೇವರಿಗ ಪ್ರೀತಿ. ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಗಳು ಇಲ್ಲದೇ ಏನೆಲ್ಲಾ ಸಮಸ್ಯೆಗಳಾಗುತ್ತಿವೆ ಅನ್ನೋದು ನಿಮಗೆಲ್ಲಾ ಗೊತ್ತೇ ಇಜದೆ. ಆದರೆ ಇದೀಗ ಕೊರೊನಾ ಟೆಸ್ಟ್ ಮಾಡಿಸೋದಕ್ಕೆ ಲ್ಯಾಬ್ ಗಳ ಕೊರತೆ ಕಾಡುತ್ತಿದೆ.

ಸರ್ಕಾರಿ ಲ್ಯಾಬ್ ಗಳ ಕೊರತೆಯಿಂದಾಗಿ ಕೋವಿಡ ಟೆಸ್ಟ್ ಮಾಡಿಸೋದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಿ ದಿನವೊಂದಕ್ಕೆ ಸಾವಿರದಿಂದ ಒಂದೂವರೆ ಸಾವಿರ ಜನ ಸ್ವ್ಯಾಬ್ ಟೆಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಿ ಲ್ಯಾಬ್ ಗಳು ಇರೋದು ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ ಎಷ್ಟೋ ಜನ ಕೊರೊನಾ ಟೆಸ್ಟ್ ಮಾಡಿಸಲು ಆಗದೇ ಮನೆಯಲ್ಲೇ ಉಳಿದು ಇನ್ನೊಂದಷ್ಟು ಮಂದಿಗೆ ಅನಿವಾರ್ಯವಾಗಿ ಕೊರೊನಾ ಹರಡುವಂತಾಗಿದೆ.

ಇನ್ನು ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ಮಾಡಿಸೋಣ ಅಂದ್ರೆ ಅಲ್ಲಿ 4 ರಿಂದ 5 ಸಾವಿರ ರೂಪಾಯಿ ಪಾವತಿ ಮಾಡಬೇಕು. ಅಷ್ಟೊಂದು ಪಾವತಿ ಮಾಡೋದು ಬಡವರು ಹಾಗೇ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಮತ್ತೊಂದು ಕಡೆ ಸರ್ಕಾರಿ ಲ್ಯಾಬ್ ಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹೆಚ್ಚಿನ ಲ್ಯಾಬ್ ಗಳ ಲ್ಯಾಬ್ ಟೆಕ್ನಿಶಿಯನ್ಸ್ ಗಳಿಗೇ ಕೊರೊನಾ ಸೋಂಕು ತಗುಲಿರೋದರಿಂದ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸೋದಕ್ಕೆ ಜನವಿಲ್ಲ. ಅಲ್ಲದೇ ಪರೀಕ್ಷೆ ನಡೆಸಿದ್ರೂ ರಿಪೋರ್ಟ್ ಬರೋದಕ್ಕೆ 4 ರಿಂದ 5 ದಿನಗಳಾಗುತ್ತಿವೆ. ಕೆಲವೊಮ್ಮೆ 10 ದಿನಗಳು ಕಳೆದ್ರೂ ರಿಪೋರ್ಟ್ ಕೈ ಸೇರೋದಿಲ್ಲ. ಇದೆಲ್ಲಾ ಕೊರೊನಾ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಾಗಿ ಕೊರೊನಾದಿಂದ ಆರೋಗ್ಯ ಹದಗೆಡುವುದಕ್ಕಿಂತ ಹೆಚ್ಚಾಗಿ ಭಯದಿಂದಲೇ ಅನೇಕರ ಆರೋಗ್ಯ ಹದಗೆಡುತ್ತಿದೆ.

- Advertisement -
spot_img

Latest News

error: Content is protected !!