Saturday, June 6, 2026
Homeಕರಾವಳಿಉಡುಪಿಉಡುಪಿ: ಲಾಭಾಂಶದ ಆಸೆಗೆ ಬಿದ್ದು, 49 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

ಉಡುಪಿ: ಲಾಭಾಂಶದ ಆಸೆಗೆ ಬಿದ್ದು, 49 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

- Advertisement -
- Advertisement -

ಉಡುಪಿ: ಲಾಭಾಂಶದ ಆಸೆಗೆ ಬಿದ್ದು, ಯುವಕನೊಬ್ಬ 49 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಮೂಡುಬೆಳ್ಳೆಯ ಫ್ರಾನ್ಸಿಸ್ ಕಾಸ್ತಲಿನೋ ಇವರ ಮಗನ ಮೊಬೈಲ್ ನಂಬರ್‌ನ್ನು ಯಾರೋ ಅಪರಿಚತರು ಸ್ಟಾಕ್‌ಮಾರ್ಕೆಟ್ ನೇವಿಗೇಷನ್ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಇದರ ಮೂಲಕ ಶೇರು ಮಾರುಕಟ್ಟೆ ಹಾಗೂ ಅದರಿಂದ ಸಿಗುವ ಲಾಭಾಂಶಗಳ ಬಗ್ಗೆ ಆಸೆ ತೋರಿಸಿ ಹಣವನ್ನು ಹೂಡಿಕೆ ಮಾಡುವಂತೆ ಅಮಿಷ ಒಡ್ಡಿದ್ದರು.

ಅವರ ಆಮಿಷದ ಬಲೆಗೆ ಬಿದ್ದ ಯುವಕ, ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಕಳೆದ ಡಿ.30ರಿಂದ ತಂದೆಯ 17 ಲಕ್ಷ ರೂ., ತಾಯಿಯ 10.50 ಲಕ್ಷ ರೂ. ತಮ್ಮದೇ ಖಾತೆಯಿಂದ 21.50 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಒಟ್ಟಾರೆಯಾಗಿ 49 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು.

ಆದರೆ ನಂತರ ಹೂಡಿಕೆ ಮಾಡಿದ ಹಣವನ್ನು ವಾಪಾಸು ಪಡೆಯಲು ಪ್ರಯತ್ನಿಸಿದಾಗ ಪುನಃ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿತ್ತು. ಆಗ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶಕ್ಕಾಗಿ ಕೇಳಿದಾಗ ಹಣ ನೀಡದೇ ನಂಬಿಸಿ, ವಂಚಿಸಿ ದ್ದಾಗಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!