Thursday, June 4, 2026
Homeಕರಾವಳಿಉಡುಪಿಕೊಲ್ಲೂರು ಮೂಕಾಂಬಿಕಾ ದೇಗುಲದ ಪ್ರಧಾನ ಅರ್ಚಕರಾಗಿದ್ದ ಮಂಜುನಾಥ ಅಡಿಗ ನಿಧನ

ಕೊಲ್ಲೂರು ಮೂಕಾಂಬಿಕಾ ದೇಗುಲದ ಪ್ರಧಾನ ಅರ್ಚಕರಾಗಿದ್ದ ಮಂಜುನಾಥ ಅಡಿಗ ನಿಧನ

- Advertisement -
- Advertisement -

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಮಂಜುನಾಥ ಅಡಿಗ (64) ನಿಧನರಾಗಿದ್ದಾರೆ‌.

ಸ್ನಾನಗೃಹದಲ್ಲಿ ಜಾರಿ ಬಿದ್ದು ಅಸ್ವಸ್ಥಗೊಂಡಿದ್ದ ಮಂಜುನಾಥ ಅಡಿಗ ಅವರು ಬುಧವಾರ ಬೆಳಿಗ್ಗೆ ಸ್ವಗೃಹದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಹದಿನೆಂಟು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಅಡಿಗ
2014ರಿಂದ ಮಗನಿಗೆ ಸೇವೆ ಹಸ್ತಾಂತರ ಮಾಡಿದ್ದರು.

ಮಂಜುನಾಥ ಅಡಿಗ ಅವರು‌ ಹದಿನೈದು ವರ್ಷಗಳಿಂದ ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!