Thursday, June 4, 2026
Homeತಾಜಾ ಸುದ್ದಿಮುಂಬೈ ಮಳೆಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ ಸಚಿನ್ ತೆಂಡುಲ್ಕರ್

ಮುಂಬೈ ಮಳೆಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ ಸಚಿನ್ ತೆಂಡುಲ್ಕರ್

- Advertisement -
- Advertisement -

ಮುಂಬೈ : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಮೈದಾನದಲ್ಲಿ ಹೇಗೆ ಇಷ್ಟಪಡುತ್ತಿದ್ದರೋ ಹಾಗೇ ಮೈದಾನದ ಹೊರಗೂ ಅವರನ್ನು ಇಷ್ಟಪಡೋದಕ್ಕೆ ಕಾರಣಗಳು ಹತ್ತಾರು. ಎಲ್ಲರಲ್ಲೂ ಖುಷಿ ಖುಷಿಯಾಗಿ ನೋಡಿಕೊಳ್ಳುವಂತಹ ಸ್ವಭಾವ ಸಚಿನ್ ಅವರದ್ದು. ಮನೆಯಲ್ಲಿ ಫ್ರೀ ಇದ್ರೆ ಸಾಕು ಅಡುಗೆ ಮಾಡೋದು ಇಲ್ಲಾ ಇನ್ನೇನಾದರೂ ಮಾಡಿ ಮನೆ ಮಂದಿಯನ್ನು ಸಂತೋಷ ಪಡಿಸ್ತಾರೆ ಸಚಿನ್. ಅಲ್ಲದೇ ಆ ಸಂತಸದ ಕ್ಷಣಗಳ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಶೇರ್ ಕೂಡ ಮಾಡಿಕೊಳ್ತಾರೆ ಸಚಿನ್.

ಇದೀಗ ಸಚಿನ್ ಅವರ ಅತ್ಯಂತ ಸುಂದರ ಕ್ಷಣವೊಂದರ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮುಂಬೈಯ ಮಳೆಯನ್ನು ಸಚಿನ್ ಯಾವ ರೀತಿ ಎಂಜಾಯ್ ಮಾಡುತ್ತಿದ್ದಾರೆ ಎನ್ನುವುದನ್ನು ಅವರ ಮಗಳು ಸೆರೆ ಹಿಡಿದಿದ್ದಾರೆ. ಆ ವಿಡಿಯೋವನ್ನು ಸಚಿನ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ನನ್ನ ಫೇವರೇಟ್ ಕ್ಯಾಮರಾ ವುಮೆನ್, ಸಾರಾ ತೆಂಡುಲ್ಕರ್ ನಾನು ಜೀವನದ ಅತ್ಯಂತ ಸರಳ ಖುಷಿಯನ್ನು ಎಂಜಾಯ್ ಮಾಡುತ್ತಿರೋದನ್ನು ಸೆರೆ ಹಿಡಿದಿದ್ದಾಳೆ. ಮಳೆಯ ಹನಿಗಳು ಯಾವಾಗಲೂ ನನ್ನ ಬಾಲ್ಯದ ನೆನಪುಗಳು ಮರಳುಕಳಿಸುವಂತೆ ಮಾಡುತ್ತವೆ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಇನ್ನು ಮಳೆಯನ್ನು ಪುಟ್ಟ ಮಗುವಿನಂತೆ ಸಚಿನ್ ಎಂಜಾಯ್ ಮಾಡುತ್ತಿದ್ದಾರೆ.

- Advertisement -

Latest News

error: Content is protected !!