ಮಾಸ್ಕೋ: ನೀವು ಈಗ ಓದುವ ಸುದ್ದಿ ನಿಮಗೆ ಅಚ್ಚರಿ ಎನಿಸದೆ ಇರಲಾರದು. ಯಾಕೆಂದರೆ ಈ ಸುದ್ದಿಯೇ ಆ ತರಹ ಇದೆ. ತನ್ನ ಗಂಡನಿಗೆ ಡೈವೋರ್ಸ್ ನೀಡಿ ಆತನ ಮೊದಲ ಪತ್ನಿಯ 20 ವರ್ಷದ ಮಲಮಗನನ್ನು ವಿವಾಹವಾಗಿರುವ ವಿಲಕ್ಷಣ ಘಟನೆ ಪಶ್ಚಿಮ ರಷ್ಯಾ ವಲಯದ ಕ್ರಾಸ್ನೊಡರ್ ಕ್ರೈ ನಗರದಲ್ಲಿ ನಡೆದಿದೆ.
ಅಚ್ಚರಿ ಎಂಬಂತೆ ಈ ನವಜೋಡಿ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
35 ವರ್ಷದ ಮರಿನಾ ಬಲ್ಮಶೆವಾ ಎಂಬ ಮಹಿಳೆ 2007 ರಲ್ಲಿ ಅಲೆಕ್ಸಿ (45) ಯನ್ನು ವರಿಸಿದ್ದರು. ಈ ಜೋಡಿ ಸುಮಾರು ಸುಮಾರು 10 ವರ್ಷಗಳ ಅವರ ವೈವಾಹಿಕ ಜೀವನ ನಡೆಸಿ 2017 ರಲ್ಲಿ ಡೈವೋರ್ಸ್ ನೀಡಿ ಪರಸ್ಪರ ದೂರವಾಗಿದ್ದರು.
ಈ ಮದುವೆಗೆ ಮೊದಲೇ ಅಲೆಕ್ಸಿಗೆ ಮೊದಲೊಂದು ಮದುವೆಯಾಗಿ ವ್ಲಾಡಿಮಿರ್ ಎಂಬ ಮಗನಿದ್ದಾನೆ. ಅಲೆಕ್ಸಿಗೂ ಆತನ ಮೊದಲ ಪತ್ನಿಗೂ ಡಿವೋರ್ಸ್ ಸಹ ಆಗಿತ್ತು. ವಿಚಿತ್ರವೇನೆಂದರೆ ಇದೀಗ ಅಲೆಕ್ಸಿಯ ಮೊದಲ ಪತ್ನಿಯ ಮಗ ಶಾವ್ಯರಿನ್ನನ್ನೇ ಮರಿನಾ ವರಿಸಿದ್ದಾಳೆ.
ವ್ಲಾಡಿಮಿರ್ 7 ವರ್ಷದ ಬಾಲಕನಾಗಿದ್ದಾಗಿನಿಂದಲೂ ಮೆರಿನಾಳೇ ಸಾಕಿ ಸಲುಹಿದ್ದಳು. ಇದೀಗ ಗಂಡನಿಗೆ ಡಿವೋರ್ಸ್ ನೀಡಿ ಮಲಮಗನೊಂದಿಗೆ ಹಸೆಮಣೆ ಏರಿದ್ದಾಳೆ. ಸದ್ಯ ಮಲಮಗನಿಗೆ 20 ವರ್ಷ ವಯಸ್ಸಾಗಿದ್ದು, ಮರಿನಾಗೆ 35 ವರ್ಷ. ಅಲ್ಲದೆ, ಇಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿಯೂ ಮರಿನಾ ಬಹಿರಂಗಪಡಿಸಿದ್ದಾಳೆ.