Tuesday, October 13, 2026
Homeಕರಾವಳಿಉಡುಪಿಕಾರ್ಕಳ: ಬೈಕ್ ನಲ್ಲಿ ಬಂದು ಮಹಿಳೆಯ ಸರ ಎಳೆದು ಪರಾರಿಯಾದ ಯುವಕ ಯುವತಿ

ಕಾರ್ಕಳ: ಬೈಕ್ ನಲ್ಲಿ ಬಂದು ಮಹಿಳೆಯ ಸರ ಎಳೆದು ಪರಾರಿಯಾದ ಯುವಕ ಯುವತಿ

- Advertisement -
- Advertisement -

ಕಾರ್ಕಳ: ಬೈಕ್ ನಲ್ಲಿ ಬಂದ ಯುವಕ ಹಾಗೂ ಯುವತಿ ಮಹಿಳೆಯೊಬ್ಬರ ಸರ ಕದ್ದು ಪರಾರಿಯಾದ ಘಟನೆ  ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಬೋಳ ಗ್ರಾಮದ ಸುಂಕಮಾರು-ಮಂಜರಪಲ್ಕೆ ಎಂಬಲ್ಲಿ ನಡೆದಿದೆ.  ವಸಂತಿ ಸರ ಕಳೆದುಕೊಂಡ ಮಹಿಳೆ.

ವಸಂತಿ ಅವರು ಸುಂಕಮಾರು-ಮಂಜರಪಲ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಯುವಕ ಮತ್ತು ಯುವತಿ, ಭಾಸ್ಕರ್‌ ಅವರ ಮನೆ ಎಲ್ಲಿ ಬರುತ್ತದೆ ಎಂದು ಕೇಳಿದ್ದಾರೆ. ಇಲ್ಲಿ ಭಾಸ್ಕರ ಎನ್ನುವವರು ಯಾರೂ ಇಲ್ಲ ಎಂದು ವಸಂತಿ ಅವರು ಹೇಳಿದ್ದಾರೆ. ಆಗ ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಯುವತಿ, ಮಹಿಳೆಯ ಕೈ ಹಿಡಿಯಲು ಮುಂದಾಗಿದ್ದು, ಬೈಕ್‌ ಸವಾರ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಚೈನ್‌ ಎಳೆದಿದ್ದಾನೆ. ಬಳಿಕ ಇಬ್ಬರೂ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!