Saturday, June 6, 2026
Homeಕರಾವಳಿಬಂಟ್ವಾಳ: ಫೇಸ್ ಬುಕ್ ನಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕಿದಾತ ಅರೆಸ್ಟ್

ಬಂಟ್ವಾಳ: ಫೇಸ್ ಬುಕ್ ನಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕಿದಾತ ಅರೆಸ್ಟ್

- Advertisement -
- Advertisement -

ಬಂಟ್ವಾಳ: ಫೇಸ್ ಬುಕ್ ನಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕಿದಾತನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯಪೂಜಾರಿ ಬಂಧಿತ.

ಜಯಪೂಜಾರಿ  ಫೇಸ್ ಬುಕ್ ಖಾತೆಯಲ್ಲಿ ಮಹಿಳೆಯರ ಬಗ್ಗೆ ಮಾನಕ್ಕೆ ಕುಂದುಂಟಾಗುವ ,ಮಹಿಳೆಯ ತೇಜೋವಧೆಯುಂಟಾಗುವ ರೀತಿಯಲ್ಲಿ ಮತ್ತು ಧರ್ಮ ಧರ್ಮಗಳ ಮಧ್ಯೆ ಕೋಮು ಪ್ರಚೋದಿಸುವ ರೀತಿಯಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ.  ಪೋಸ್ಟ್  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೋಲೀಸರು ಸುಮೋಟೋ ಕೇಸ್ ದಾಖಲಿಸಿ ಈತನನ್ನು ಬಂಧಿಸಿ , ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!