Thursday, June 25, 2026
Homeಕರಾವಳಿಪುತ್ತೂರು; ಉಪ್ಪಿನಂಗಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ನುಗ್ಗಿದ ಆ್ಯಂಬುಲೆನ್ಸ್

ಪುತ್ತೂರು; ಉಪ್ಪಿನಂಗಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ನುಗ್ಗಿದ ಆ್ಯಂಬುಲೆನ್ಸ್

- Advertisement -
- Advertisement -

ಪುತ್ತೂರು; ಆ್ಯಂಬುಲೆನ್ಸ್ ಒಂದು ಉಪ್ಪಿನಂಗಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮನೆಯ ಅಂಗಳಕ್ಕೆ ನುಗ್ಗಿದ  ಘಟನೆ ಇಂದು ಬೆಳಿಗ್ಗೆ 34 ನೆಕ್ಕಿಲಾಡಿಯಲ್ಲಿ ನಡೆದಿದೆ.


ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಆ್ಯಂಬುಲೆನ್ಸ್ ಇಲ್ಲಿನ ವನಸುಮ ನರ್ಸರಿ ರಸ್ತೆಯಲ್ಲಿ ನೇರ ಸಾಗಿ ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ ಮನೆಯ ಆವರಣಗೋಡೆಗೆ ಹಾನಿಯಾಗಿದ್ದು, ಆ್ಯಂಬುಲೆನ್ಸ್ ಮನೆಯ ಗೋಡೆಗೆ ಢಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಸಂದರ್ಭ ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಕ

ನ್ಯಾಡಿಯ ಸೇವಾ ಭಾರತಿಗೆ ಸೇರಿದ ಆ್ಯಂಬುಲೆನ್ಸ್ ಇದಾಗಿದ್ದು, ಆರೋಗ್ಯ ಶಿಬಿರವೊಂದಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಆಂಬ್ಯುಲೆನ್ಸ್ ಚಾಲಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

- Advertisement -

Latest News

error: Content is protected !!