Friday, June 5, 2026
Homeಕರಾವಳಿಮಂಗಳೂರುಮಂಗಳೂರು:ಮನೆಗೆ ನುಗ್ಗಿ ಹಿಂದೂ ಮಹಿಳೆ ಹಾಗೂ ಯುವತಿಯ ಜೊತೆ ಮುಸ್ಲಿಂ ಯುವಕನ ಅಸಭ್ಯ ವರ್ತನೆ, ಬಂಧನ

ಮಂಗಳೂರು:ಮನೆಗೆ ನುಗ್ಗಿ ಹಿಂದೂ ಮಹಿಳೆ ಹಾಗೂ ಯುವತಿಯ ಜೊತೆ ಮುಸ್ಲಿಂ ಯುವಕನ ಅಸಭ್ಯ ವರ್ತನೆ, ಬಂಧನ

- Advertisement -
- Advertisement -

ಮಂಗಳೂರು;  ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಹಿಂದೂ ಮಹಿಳೆಯೊಬ್ಬರ ಮನೆಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಅಕ್ಕನ ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಕುಲಶೇಖರ್ ದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದ ಸೈಯದ್ ನಹೀಂ (25) ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಸೈಯದ್ ನಹೀಂ ಶುಕ್ರವಾರ ಮಧ್ಯಾಹ್ನ 12:40ಕ್ಕೆ ಕುಲಶೇಖರದ ಮಹಿಳೆಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಆಕೆಯ ಅಕ್ಕನ ಮಗಳ ಜೊತೆ ಅನುಚಿತವಾಗಿ ವರ್ತಿಸಿದ ಎನ್ನಲಾಗಿದೆ. ವೈಯಕ್ತಿಕ ಕೆಲಸದ ನಿಮಿತ್ತ ಮಂಗಳೂರಿಗೆ ಆರೋಪಿ ಬಂದಿದ್ದು, ಈತನಿಗೂ ಮಹಿಳೆಗೂ ಹಣಕಾಸಿನ ವಿಷಯದಲ್ಲಿ ಜಗಳವಾಗಿತ್ತು ಎಂದು ಹೇಳಲಾಗಿದೆ. ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!