Thursday, July 23, 2026
Homeಕರಾವಳಿಮಂಗಳೂರುತಮಿಳುನಾಡಿನಲ್ಲಿ ಪೆಂಗಲ್ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆ; ನಾಳೆ ಶಾಲೆ, ಪದವಿ ಕಾಲೇಜುಗಳಿಗೆ ರಜೆ

ತಮಿಳುನಾಡಿನಲ್ಲಿ ಪೆಂಗಲ್ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆ; ನಾಳೆ ಶಾಲೆ, ಪದವಿ ಕಾಲೇಜುಗಳಿಗೆ ರಜೆ

- Advertisement -
- Advertisement -

ಮಂಗಳೂರು; ತಮಿಳುನಾಡಿನಲ್ಲಿ ಪೆಂಗಲ್ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು ನಾಳೆ ಶಾಲೆ, ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ಮುಲೈ ಮುಗಿಲನ್ ಅದೇಶ ಹೊರಡಿಸಿದ್ದಾರೆ.

 ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಹೀಗಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ ಅನುದಾನಿತ. ಖಾಸಗಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಡಿ.3 ರಂದು ನಾಳೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ನದಿ,ತೋಡುಗಳ ಬಳಿ ತೆರಳದಂತೆ ಎಚ್ಚರಿಕೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲೂ ನಾಳೆ ಅಂಗನವಾಡಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

- Advertisement -

Latest News

error: Content is protected !!