Monday, June 8, 2026
Homeಕರಾವಳಿಮಂಗಳೂರುಬಂಟ್ವಾಳ: ಐದನೇ ಮದುವೆಯಾಗಲು ಹೊರಟ ಪತಿಗೆ ಅಡ್ಡಿಪಡಿಸಿದ್ದಕ್ಕೆ ಪತ್ನಿಗೆ ಹಲ್ಲೆ

ಬಂಟ್ವಾಳ: ಐದನೇ ಮದುವೆಯಾಗಲು ಹೊರಟ ಪತಿಗೆ ಅಡ್ಡಿಪಡಿಸಿದ್ದಕ್ಕೆ ಪತ್ನಿಗೆ ಹಲ್ಲೆ

- Advertisement -
- Advertisement -

ಬಂಟ್ವಾಳ: ಐದನೇ ಮದುವೆಯಾಗಲು ಹೊರಟ ಪತಿಗೆ ಅಡ್ಡಿಪಡಿಸಿದ್ದಕ್ಕೆ ಪತ್ನಿಗೆ ಹಲ್ಲೆ ಮಾಡಿರುವ ಘಟನೆ ಪಾಣೆಮಂಗಳೂರಿನ ಗೂಡಿನಬಳಿಯಲ್ಲಿ ನಡೆದಿದೆ. ನವೆಂಬರ್ 27ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡಿನಬಳಿ ನಿವಾಸಿ ಮಹಮ್ಮದ್ ರಫೀಕ್ ಹಲ್ಲೆ ಮಾಡಿದ ಆರೋಪಿ. ಆತನ ವಿರುದ್ಧ ನಾಲ್ಕನೇ ಪತ್ನಿ ದೂರು ನೀಡಿದ್ದಾರೆ. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಗು ಹಾಗೂ ತನಗೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ.ಜತೆಗೆ ಚಿನ್ನಾಭರಣಗಳನ್ನೂ ದೋಚಿದ್ದು, ಆತನಿಗೆ ಈಗಾಗಲೇ ತನ್ನನ್ನು ಸೇರಿ ನಾಲ್ಕು ಮದುವೆಯಾಗಿದ್ದು, 5ನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!