- Advertisement -
![]()
- Advertisement -
ಮೂಡಬಿದಿರೆ: ಇಲ್ಲಿನ ಮೂಲ್ಕಿ ಪರಿಸರದಲ್ಲಿ ಕೆಲವು ಸಮಯಗಳಿಂದ ಚಿರತೆ ಭೀತಿ ಮೂಡಿಸಿದ್ದು, ಇದೀಗ ವಿಜಯ ಕಾಲೇಜು ರಸ್ತೆಯ ಕಕ್ವ ರಸ್ತೆಯ ತಿರುವಿನ ಬಳಿಯಲ್ಲಿ ಮಂಗಳವಾರ ರಾತ್ರಿ 8.45 ಸುಮಾರಿಗೆ ರಿಕ್ಷಾ ಚಾಲಕರೊಬ್ಬರಿಗೆ ಚಿರತೆ ಕಾಣಸಿಕ್ಕಿದೆ ಎನ್ನಲಾಗಿದೆ.
ರಿಕ್ಷಾ ಚಾಲಕರೊಬ್ಬರು ರಾತ್ರಿಯ ಸಮಯದಲ್ಲಿ ಮಟ್ಟು ಕಡೆಗೆ ಹೋಗುತ್ತಿದ್ದಾಗ ಚಿರತೆಯು ಉಮಾಮಹೇಶ್ವರ ದೇವಸ್ಥಾನ ಸಮೀಪದಲ್ಲಿ ಕಂಡು ಬಂದಿದೆ.
ಭಾರೀ ಗಾತ್ರದ ಚಿರತೆಯೊಂದು ರಸ್ತೆಗೆ ಹಾರಿ ಯಾವುದೋ ಪ್ರಾಣಿಯನ್ನು ಬೆನ್ನಟ್ಟಿ ಹೋದಂತೆ ಕಂಡು ಬಂದಿದೆ. ಬಳಿಕ ಅದು ಪೊದೆಯೊಳಗೆ ಸೇರಿಕೊಂಡಿರುವುದಾಗಿ ಆಟೋ ಚಾಲಕ ತಿಳಿಸಿದ್ದಾರೆ.
- Advertisement -


