Wednesday, June 3, 2026
Homeಕರಾವಳಿಉಡುಪಿಕಾರ್ಕಳ : ಕೊಂಬೆ ಕಡಿಯಲು ಮರದ ಏರಿದ ವ್ಯಕ್ತಿ ಮರದಿಂದ ಬಿದ್ದು ಸಾವು

ಕಾರ್ಕಳ : ಕೊಂಬೆ ಕಡಿಯಲು ಮರದ ಏರಿದ ವ್ಯಕ್ತಿ ಮರದಿಂದ ಬಿದ್ದು ಸಾವು

- Advertisement -
- Advertisement -

ಕಾರ್ಕಳ : ಕೊಂಬೆ ಕಡಿಯಲು ಮರದ ಏರಿದ ವ್ಯಕ್ತಿ ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಹೆಬ್ರಿಯ ಕಬ್ಬಿನಾಲೆಯಲ್ಲಿ  ಸಂಭವಿಸಿದೆ. ಕಬ್ಬಿನಾಲೆಯ ಹೊನ್ನಕೊಪ್ಪಲ ನಿವಾಸಿ ಜ್ಞಾನೇಶ್ವರ್ ಹೆಬ್ಬಾರ್ (59) ಮೃತ ದುರ್ದೈವಿ. 

ಹೆಬ್ಬಾರ್ ಅವರು ಬುಧವಾರ ಬೆಳಿಗ್ಗೆ ಮನೆಯ ಬಳಿಯಿದ್ದ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಜಾಣ ಎಂದೇ ಕರೆಯಲ್ಪಡುತ್ತಿದ್ದ ಇವರು ಮುನಿಯಾಲು ಪಬ್ಲಿಕ್ ಸ್ಕೂಲ್‌ನ ಮಾಜಿ ಅಧ್ಯಕ್ಷರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!