Tuesday, June 9, 2026
Homeಅಪರಾಧಪ್ರಿಯತಮನಿಗೋಸ್ಕರ ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

ಪ್ರಿಯತಮನಿಗೋಸ್ಕರ ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

- Advertisement -
- Advertisement -

ಕುಂಬಳೆ: ಯುವತಿಯೊಬ್ಬಳು ತನ್ನ ತಂದೆ ಮತ್ತು ತಾಯಿಯನ್ನು ಮನೆಯ ಕೊಠಡಿಯಲ್ಲಿ ಕೂಡಿ ಹಾಕಿ, ಕಾರು ಸಹಿತ ಪರಾರಿಯಾದ ಘಟನೆ ನಡೆದಿದೆ.

19ರ ಹರೆಯದ ಕಯ್ನಾರು ಶಾಂತಿಯೋಡು ನಿವಾಸಿಯ ಯುವತಿಯು ನ. 25ರಂದು ಪ್ರಿಯತಮನೊಂದಿಗೆ ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದೆ.

ಪೋಷಕರು ನೀಡಿದ ದೂರಿನಂತೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಯುವತಿ ಕೊಂಡ್ಯೊಯ್ದ ಕಾರು ಬಂದ್ಯೋಡು ಮೀಪಿರಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಯುವತಿ ಓರ್ವ ಯುಕವನನ್ನು ಪ್ರೀತಿಸುತ್ತಿದ್ದು, ಈ ಮಧ್ಯೆ ಈಕೆಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲಾಗಿತ್ತು. ಆದರೆ ಈ ವಿವಾಹ ಸಂಬಂಧವು ಕೇವಲ ಎರಡು ತಿಂಗಳೊಳಗೆ ಮುರಿದು ಬಿದ್ದಿತ್ತು. ಮದುವೆ ಮುರಿದು ಬಿದ್ದ ಬೆನ್ನಲ್ಲೇ ಯುವತಿ ಒಮ್ಮೆ ನಾಪತ್ತೆಯಾಗಿ ಮರುದಿನ ಮನೆಗೆ ವಾಪಸಾಗಿದ್ದಳು ಎನ್ನಲಾಗಿದೆ. ಇದೀಗ ಆ ಯುವತಿಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲು ಮನೆಯವರು ಆಲೋಚಿಸುತ್ತಿರುವಂತೆಯೇ ಯುವತಿಯು ತನ್ನ ತಂದೆ, ತಾಯಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಬಳಿಕ ಪರಾರಿಯಾಗಿದ್ದಾಳೆಂದು ಪೊಲೀಸರಿಗೆ ತಿಳಿಸಲಾಗಿದೆ.

- Advertisement -

Latest News

error: Content is protected !!