Sunday, June 7, 2026
Homeಕರಾವಳಿಬೆಳ್ತಂಗಡಿ ವಕೀಲರ ಸಂಘ(ರಿ)ದಿಂದ ರಸಪ್ರಶ್ನೆ ಕಾರ್ಯಕ್ರಮ

ಬೆಳ್ತಂಗಡಿ ವಕೀಲರ ಸಂಘ(ರಿ)ದಿಂದ ರಸಪ್ರಶ್ನೆ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ವಕೀಲರ ಸಂಘ (ರಿ) ವತಿಯಿಂದ ಹಾಗೂ ಯುವ ವಕೀಲರ ವೇದಿಕೆ ನೇತೃತ್ವದಲ್ಲಿ ವಕೀಲರ ಭವನದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಯುವ ವಕೀಲರಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕ್ವಿಜ್ ಮಾಸ್ಟರ್ ಆಗಿ ಬಹಳ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಭಾಗವಹಿಸಿದ ಸ್ಪರ್ಧಿಗಳಿಗೆ ಸ್ವತಃ ಬಹುಮಾನವನ್ನು ವಕೀಲರ ಸಂಘದ ಸದಸ್ಯರಾದ ಶ್ರೀ ಶ್ರೀ ಕೃಷ್ಣ ಶೆಣೈ ಇವರು ನೀಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕ್ಕಡ, ಹಿರಿಯ ನ್ಯಾಯವಾದಿಯಾದ ಶ್ರೀ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶ್ರೀ ವೈ ರಾಧಾಕೃಷ್ಣ, ಶ್ರೀಮತಿ ಸ್ವರ್ಣ ಲತಾ ಎ, ಕೋಶಾಧಿಕಾರಿಯಾದ ಶ್ರೀ ಪ್ರಶಾಂತ್ ಎಂ ಹಾಗೂ ಮನೋಹರ್ ಕುಮಾರ್ ಎ ವಕೀಲರು, ಯುವ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಡಿಸೋಜ, ಶ್ರೀಮತಿ ವೀಕ್ಷಿತಾ, ಶ್ರೀಮತಿ ಉಷಾ ಎನ್ ಜಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯುವ ವಕೀಲರ ವೇದಿಕೆಯ ಕಾರ್ಯದರ್ಶಿಯಾದ ಶ್ರೀಮತಿ ಜೋಸ್ನಾ ವೆಲೋನ ಕೊರೆಯ ಎಲ್ಲರನ್ನು ಸ್ವಾಗತಿಸಿ, ವಕೀಲರ ಸಂಘ(ರಿ ) ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ ಕೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

- Advertisement -

Latest News

error: Content is protected !!