Monday, June 15, 2026
Homeತಾಜಾ ಸುದ್ದಿಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಾಗಿ ಬಿಪಿಎಲ್ ಕಾರ್ಡ್ ರದ್ದು..!; ಬಿ.ವೈ.‌ ವಿಜಯೇಂದ್ರ ಗಂಭೀರ ಆರೋಪ

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಾಗಿ ಬಿಪಿಎಲ್ ಕಾರ್ಡ್ ರದ್ದು..!; ಬಿ.ವೈ.‌ ವಿಜಯೇಂದ್ರ ಗಂಭೀರ ಆರೋಪ

- Advertisement -
- Advertisement -

ಹುಬ್ಬಳ್ಳಿ: ರಾಜ್ಯದ ಸುಮಾರು 21ಲಕ್ಷ ಬಿಪಿಎಲ್ ಕಾರ್ಡ್ ಅನ್ನು ಕಾಂಗ್ರೆಸ್ ಸರಕಾರ ತನ್ನ ಗ್ಯಾರಂಟಿ ಯೋಜನೆಯ ನಿರ್ವಹಣೆಗಾಗಿ ರದ್ದುಗೊಳಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.‌ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಅವರು ಈ ಕುರಿತಂತೆ ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಿ  ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ಯೋಜನೆಗೆ ಹಣ ಹೊಂದಿಸಲು ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಹೊರಟಿದೆ. ಅದರಿಂದ ಗೃಹಲಕ್ಷ್ಮಿಯ ಸಾವಿರಾರು ಕೋಟಿ ರೂ. ಹಣ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ  ಇಂತಹ ಕೆಲಸಕ್ಕೆ ಮುಂದಾಗಿದೆ,’ ಎಂದರು.

‘ಇನ್ನು ಕಾಂಗ್ರೆಸ್ ಪಕ್ಷದಲ್ಲೇ ಸಿಎಂಗಾಗಿ ಪೈಪೋಟಿ ತೀವ್ರಗೊಂಡಿದೆ.‌ ಸಿಎಂ ಕುರ್ಚಿ ಹರಾಜಿಗೆ ಇಟ್ಟಿದ್ದು, ಆಡಳಿತ ಪಕ್ಷದವರೇ ಶಾಸಕರನ್ನು ಹರಾಜು ಮಾಡುತ್ತಿದ್ದಾರ. ಆದರೆ  ಬಿಜೆಪಿ 66 ಶಾಸಕರನ್ನು ಇಟ್ಟುಕೊಂಡು ಆಡಳಿತ ನಡೆಸಲು ಇಚ್ಛಿಸಲ್ಲ. ಅದರ ಅವಶ್ಯಕತೆಯೂ ಇಲ್ಲ,” ಎಂದು ಆರೋಪಿಸಿದರು.

- Advertisement -

Latest News

error: Content is protected !!