Thursday, June 4, 2026
Homeಕರಾವಳಿಉಡುಪಿಉಡುಪಿ: ಹೆಬ್ರಿ ತಾಲೂಕಿನ ಕೂಡ್ಲುವಿನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ

ಉಡುಪಿ: ಹೆಬ್ರಿ ತಾಲೂಕಿನ ಕೂಡ್ಲುವಿನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ

- Advertisement -
- Advertisement -

ಉಡುಪಿ; ಎಎನ್ ಎಫ್ ನಿಂದ ಎನ್ ಕೌಂಟರ್ ನಲ್ಲಿ ಹತರಾದ ನಕ್ಸಲ್ ನಾಯಕ ವಿಕ್ರಂ ಗೌಡ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಹೆಬ್ರಿ ತಾಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿತು. ಕುಟುಂಬಸ್ಥರು, ಸಂಬಂಧಿಕರ ಸಮ್ಮುಖದಲ್ಲಿ ವಿಕ್ರಂ ಗೌಡ ಅಂತ್ಯಸಂಸ್ಕಾರ ನೆರವೇರಿತು.

ಸೋಮವಾರ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಎಎನ್ಎಫ್ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ನೇತ್ರಾವತಿ ನಕ್ಸಲ್ ದಳದ ನಾಯಕ ವಿಕ್ರಮ್ ಗೌಡ ಎಎನ್ಎಫ್ ಎನ್ ಕೌಂಟರ್ ಗೆ ಬಲಿಯಾಗಿದ್ದರು.

ಕಬ್ಬಿನಾಲೆಯ ಪೀತೆ ಬೈಲ್ ನಲ್ಲಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ನಕ್ಸಲ್ ಚಲನವಲನಗಳ ಮಾಹಿತಿ ಹಿನ್ನೆಲೆಯಲ್ಲಿ ಎಎನ್ ಎಫ್ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದ ವೇಳೆ ನಕ್ಸಲರು ಮುಖಾಮುಖಿಯಾಗಿದ್ದರು. ಸುಮಾರು ಹದಿಮೂರು ವರ್ಷಗಳ ಬಳಿಕ ನಕ್ಸಲ್ ಎನ್ ಕೌಂಟರ್ ನಡೆದಿದ್ದು, ಕಾರ್ಯಾಚರಣೆ ವೇಳೆ ಮೂವರು ನಕ್ಸಲರು ಪರಾರಿಯಾಗಿದ್ದರು.

- Advertisement -

Latest News

error: Content is protected !!