Wednesday, June 3, 2026
Homeಕರಾವಳಿಉಡುಪಿಉಡುಪಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ; ಮಹಾಎಕ್ಸ್ ಪ್ರೆಸ್ ಗೆ ಘಟನೆಯ...

ಉಡುಪಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ; ಮಹಾಎಕ್ಸ್ ಪ್ರೆಸ್ ಗೆ ಘಟನೆಯ ಎಫ್.ಐ.ಆರ್ ಪ್ರತಿ ಲಭ್ಯ;

- Advertisement -
- Advertisement -

ಉಡುಪಿ‌: ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ 61 ಪ್ರಕರಣದ ಆರೋಪಿ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್.ಐ.ಆರ್ ಪ್ರತಿ ಮಾಹಿತಿ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಲಭ್ಯವಾಗಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮದ ಪೀತ್ ಬೈಲ್ ಸುಧಾಕರ್ ಎಂಬವರ ಮನೆಯ ಬಳಿ ನಡೆದ ವಿಕ್ರಂ ಗೌಡ ಮೇಲೆ ಎನ್.ಎನ್.ಎಫ್ ಎನ್ಕೌಂಟರ್ ಪ್ರಕರಣದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎ.ಎನ್.ಎಫ್ ಡಿವೈಎಸ್ಪಿ ರಾಘವೇಂದ್ರ.ಆರ್. ನಾಯ್ಕ್ ನ. 19 ರಂದು ನಕ್ಸಲ್ ನಾಯಕ ವಿಕ್ರಂ ಗೌಡ ಮತ್ತು ಇತರರ ಮೇಲೆ ನೀಡಿದ ದೂರಿನಂತೆ BNS 2023 (u/s-111,113,132,61(1),62,143,3(5),ARMS ACT (AMENDMENT) ಆಕ್ಟ್ ,2019(u/s-3-25),UNLAWFUL ACTIVITIES (PREVENTION) ACT,1967(u/s-10,16(1)(B),20,38 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಹೆಬ್ರಿ ಎ.ಎನ್.ಎಫ್ ಡಿವೈಎಸ್ಪಿ ರಾಘವೇಂದ್ರ.ಆರ್.ನಾಯ್ಕ್ ಹಾಗೂ ತಂಡದ ಸಿಬ್ಬಂದಿ ಜೊತೆ  ನ.18 ರಂದು ಸಂಜೆ 5 ಗಂಟೆಗೆ ನಿಷೇದಿತ ಉಗ್ರವಾದಿ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರ ಚಲನವಲನದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಾಡ್ಪಾಲು ಗ್ರಾಮದ ಪೀತಬೈಲಿನ ಕಾಡಿನಲ್ಲಿ ಕೂಬಿಂಗ್ ಮಾಡುತ್ತಿರುವಾಗ ಸಂಜೆ 6 ಗೆ 3-4 ಬಂದೂಕುಧಾರಿಗಳು ಬರುತ್ತಿರುವುದು ಕಂಡುಬಂದಿದ್ದು, ಅವರುಗಳನ್ನು ವಿಕ್ರಮ ಗೌಡ ಹಾಗೂ ಇತರ ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರೆಂದು ಖಚಿತ ಪಡಿಸಿಕೊಂಡು “ನಾವು ಪೊಲೀಸ್ ರು ಶರಣಾಗಿ” ಎಂದು ಪದೇ ಪದೇ ಕೂಗಿ ಹೇಳಿದರು . ಆದರೂ ಸಹ ಅದನ್ನು ಧಿಕ್ಕರಿಸಿ ವಿಕ್ರಮ ಗೌಡ ಹಾಗೂ ಇತರರು, ಪಿರ್ಯಾದಿದಾರರು ಹಾಗೂ ಸಿಬ್ಬಂದಿಯನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಿದ್ದು. ಅತ್ಮರಕ್ಷಣೆಗಾಗಿ ದೂರುದಾರರು ಹಾಗೂ ಸಿಬ್ಬಂದಿಗಳು ಪ್ರತಿದಾಳಿ ಮಾಡಿದ ಪರಿಣಾಮ ವಿಕ್ರಮ ಗೌಡನಿಗೆ ಗುಂಡು ತಗುಲಿ ಕುಸಿದು ಬಿದ್ದಿರುತ್ತಾರೆ.  ಇತರರು ಗುಂಡು ಹಾರಿಸುತ್ತಾ ಕಾಡಿನಲ್ಲಿ ಪರಾರಿಯಾಗಿರುತ್ತಾರೆ.  ಕುಸಿದು ಬಿದ್ದ ವಿಕ್ರಮ ಗೌಡನು ಸ್ಥಳದಲ್ಲಿ ಮೃತಪಟ್ಟಿದ್ದು ಆತನ ಬಳಿಯಿದ್ದ 9 ಎಂಎಂ ಕಾರ್ಬೈನ್ ಗನ್ ಇರುವುದು ಕಂಡು ಬಂದಿರುತ್ತದೆ.  ಮೃತ ಪಟ್ಟ ಹಾಗೂ ಪರಾರಿಯಾದ ಆರೋಪಿಗಳು ನಿಷೇಧಿತ ಉಗ್ರವಾದಿ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರಾಗಿದ್ದು ರಾಷ್ಟ್ರೀಯ ಭದ್ರತೆಗೆ ಭಂಗ ತರುವ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸುಲಿಗೆ ಮುಂತಾದ ಸಂಘಟಿತ ಅಪರಾಧಗಳಲ್ಲಿ ತೊಡಗಿದವರಾಗಿದ್ದು ವಿಧಿಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಫಿರ್ಯಾದಿದಾರರು ಹಾಗೂ ಸಿಬ್ಬಂದಿಯನ್ನು ಕೊಲೆ ಮಾಡಲು ಪ್ರಯತ್ನಿಸಿದ ಮೃತ ವಿಕ್ರಮ ಗೌಡ ಮತ್ತು ಪರಾರಿಯಾದ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ನ.19/ರಂದು ಎ.ಎನ್.ಎಫ್ ಡಿವೈಎಸ್ಪಿ ರಾಘವೇಂದ್ರ.ಆರ್.ನಾಯ್ಕ್  ದೂರು ನೀಡಿದ್ದಾರೆ.

- Advertisement -

Latest News

error: Content is protected !!