Thursday, June 4, 2026
Homeಕರಾವಳಿಉಡುಪಿಉಡುಪಿ: ಹಿಟ್ ಅಂಡ್ ರನ್ ಪ್ರಕರಣ; ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ...

ಉಡುಪಿ: ಹಿಟ್ ಅಂಡ್ ರನ್ ಪ್ರಕರಣ; ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ ಅರೆಸ್ಟ್

- Advertisement -
- Advertisement -

ಉಡುಪಿ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪ್ರಜ್ವಲ್ ಶೆಟ್ಟಿ ಚಲಾಯಿಸುತ್ತಿದ್ದ ಥಾರ್ ಜೀಪ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ನವೆಂಬರ್ 11 ರಂದು ಮುಂಜಾನೆ ಕಾಪು ತಾಲೂಕಿನ
ಬೆಳಪುವಿನ ಮಿಲಿಟರಿ ಕಾಲನಿಯಲ್ಲಿ ಈ ಅಪಘಾತ ಸಂಭವಿಸಿತ್ತು.

ಅಪಘಾತದಲ್ಲಿ ಬೈಕ್ ಸವಾರ ಮೊಹಮ್ಮದ್ ಹುಸೈನ್ (39) ಮೃತಪಟ್ಟಿದ್ದು, ಅಪಘಾತದ ದೃಶ್ಯ ಮತ್ತು ಆರೋಪಿ ಪ್ರಜ್ವಲ್ ಶೆಟ್ಟಿ ಅಪಘಾತವೆಸಗಿ ಸ್ಥಳದಿಂದ ತೆರಳಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ಅಪಘಾತ ಪ್ರಕರಣ ನಡೆದ ಬೆನ್ನಲ್ಲೇ ಪ್ರಜ್ವಲ್ ಶೆಟ್ಟಿ ತಲೆಮರೆಸಿಕೊಂಡಿದ್ದು, ನಿನ್ನೆ ಶಿರ್ವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!