Wednesday, June 3, 2026
Homeಕರಾವಳಿಬಂಟ್ವಾಳ: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸ್ಕೂಟರ್ ಸವಾರ ಸಾವು

ಬಂಟ್ವಾಳ: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸ್ಕೂಟರ್ ಸವಾರ ಸಾವು

- Advertisement -
- Advertisement -

ಬಂಟ್ವಾಳ: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ವಗ್ಗ ಸಮೀಪದ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಿವಾಸಿ ಬಾಳಪ್ಪ (63) ಮೃತ ದುರ್ದೈವಿ.

ಬಾಳಪ್ಪ ಅವರು ಹೊಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಹೊಟೇಲ್ ಗೆ ಸಾಮಾಗ್ರಿಗಳನ್ನು ತರಲು ವಗ್ಗಕ್ಕೆ ಹೋಗಿದ್ದರು. ಸಾಮಾಗ್ರಿಗಳನ್ನು ತೆಗೆದುಕೊಂಡು  ಕಡೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಗ್ಗದಿಂದ ಕೊಪ್ಪಳ ಕಡೆಗೆ ಬರುವಾಗ ಬಿಸಿರೋಡಿನ ಕಡೆಯಿಂದ ಬರುತ್ತಿದ್ದ ಶಾಲಾ ವಾಹನ ಬಾಳಪ್ಪ ಅವರ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆ ಹಾಗೂ ಇತರ ಭಾಗಗಳಿಗೆ ಗಂಭೀರವಾಗಿ ಗಾಯವಾಗಿತ್ತು.ಕೂಡಲೇ ಸ್ಕೂಟರ್ ಸವಾರನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು ಅಪಘಾತಕ್ಕೆ ಶಾಲಾ ವಾಹನದ ಚಾಲಕ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಹೇಳಲಾಗಿದೆ.ಬಂಟ್ವಾಳ: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ವಗ್ಗ ಸಮೀಪದ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಿವಾಸಿ ಬಾಳಪ್ಪ (63) ಮೃತ ದುರ್ದೈವಿ.

ಬಾಳಪ್ಪ ಅವರು ಹೊಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಹೊಟೇಲ್ ಗೆ ಸಾಮಾಗ್ರಿಗಳನ್ನು ತರಲು ವಗ್ಗಕ್ಕೆ ಹೋಗಿದ್ದರು. ಸಾಮಾಗ್ರಿಗಳನ್ನು ತೆಗೆದುಕೊಂಡು  ಕಡೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಗ್ಗದಿಂದ ಕೊಪ್ಪಳ ಕಡೆಗೆ ಬರುವಾಗ ಬಿಸಿರೋಡಿನ ಕಡೆಯಿಂದ ಬರುತ್ತಿದ್ದ ಶಾಲಾ ವಾಹನ ಬಾಳಪ್ಪ ಅವರ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆ ಹಾಗೂ ಇತರ ಭಾಗಗಳಿಗೆ ಗಂಭೀರವಾಗಿ ಗಾಯವಾಗಿತ್ತು.ಕೂಡಲೇ ಸ್ಕೂಟರ್ ಸವಾರನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು ಅಪಘಾತಕ್ಕೆ ಶಾಲಾ ವಾಹನದ ಚಾಲಕ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಹೇಳಲಾಗಿದೆ.

- Advertisement -

Latest News

error: Content is protected !!