Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ : ಪ್ರಿಯತಮೆಯನ್ನು ನೋಡಲು ಬಂದ ಯುವಕನಿಗೆ ಅಮಾನವೀಯವಾಗಿ ಹಲ್ಲೆ

ಬಂಟ್ವಾಳ : ಪ್ರಿಯತಮೆಯನ್ನು ನೋಡಲು ಬಂದ ಯುವಕನಿಗೆ ಅಮಾನವೀಯವಾಗಿ ಹಲ್ಲೆ

- Advertisement -
- Advertisement -

ಬಂಟ್ವಾಳ : ಪ್ರಿಯತಮೆಯನ್ನು ನೋಡಲು ಬಂದ ಯುವಕನಿಗೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ  ಸಜಿಪನಡು ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ಬೆಂಗರೆ ನಿವಾಸಿ ಮಹಮ್ಮದ್ ಮುಸ್ತಫಾ ಹಲ್ಲೆಗೊಳಗಾದ ಯುವಕ.

ಮಹಮ್ಮದ್ ಮುಸ್ತಫಾ ಸಜಿಪನಡುವಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಈ ಯುವತಿಯನ್ನು ಭೇಟಿಯಾಗಲು ಹೋದಾಗ  ಮುಸ್ತಾಫಾನನ್ನು ಹಿಡಿದು  ಅರೆ ಬತ್ತಲೆ ಮಾಡಿ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡುವುದನ್ನು ಕೂಡ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.  ಹಲ್ಲೆಗೊಳಗಾದ ಯುವಕನಿಂದ ಇದೀಗ  ಪೋಲೀಸರಿಗೆ ದೂರು ಸಲ್ಲಿಸಲಾಗಿದ್ದು  ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Latest News

error: Content is protected !!