- Advertisement -
![]()
- Advertisement -
ಎರಡು ಬಾರಿ ಸಂಸದರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಗೋಪಾಲ್ ಶೆಟ್ಟಿ ಮಹಾರಾಷ್ಟ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಮೂಲತಃ ಗೋಪಾಲ್ ಶೆಟ್ಟಿ ಅವರು ಕರ್ನಾಟಕ ಕರಾವಳಿಯವರು.
ಗೋಪಾಲ್ ಶೆಟ್ಟಿ ಅವರು ಉತ್ತರ ಮುಂಬಯಿನ ಬೋರಿವಲಿ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಸಂಜಯ್ ಉಪಾಧ್ಯಾಯ ವಿರುದ್ಧ ಬಂಡಾಯ ಸಾರಿದ್ದರು. ಅವರ ನಾಮಪತ್ರ ಸಲ್ಲಿಕೆಗೂ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಂಡಾಯದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ತಕ್ಷಣವೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಧ್ಯಸ್ಥಿಕೆಗೆ ಕರೆಸಿ ನಡೆದ ಸಂಧಾನ ಸಭೆ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದರು.
- Advertisement -


